Job Description: * ಪ್ರಸ್ತುತ ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿನ ರಾಜಪಥದಲ್ಲಿ ಪ್ರದರ್ಶನಕ್ಕೆ ಕರ್ನಾಟಕದ ಟ್ಯಾಬ್ಲೋ ಆಯ್ಕೆಯಾಗಿದೆ. ಇದು ಸತತವಾಗಿ 13 ನೇ ವರ್ಷ ಆಯ್ಕೆಗೊಂಡಿದೆ. * ಈ ಕರ್ನಾಟಕದ ಟ್ಯಾಬ್ಲೋ ಪ್ರಸ್ತುತ ಕರ್ನಾಟಕ ರಾಜ್ಯದ ಕರಕುಶಲಕಲೆಗಳನ್ನು ತೋರಿಸುವ ಸ್ತಬ್ಧಚಿತ್ರವು ಪ್ರದರ್ಶನವಾಗಲಿದೆ. ಇದೀಗ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರ ಇದಾಗಿದೆ, ಅಷ್ಟೇ ಅಲ್ಲದೇ ಕರ್ನಾಟಕದ ಟ್ಯಾಬ್ಲೋ ಸತತ 13 ನೇ ವರ್ಷ ಗಣರಾಜ್ಯೋತ್ಸವದ ರಾಜಪಥದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗುತ್ತಿದೆ. * ಇದರಲ್ಲಿ ಕರ್ನಾಟಕ ರಾಜ್ಯದ ಚನ್ನಪಟ್ಟಣದ ಗೊಂಬೆ, ಕಿನ್ನಾಳದ ಗೊಂಬೆ, ಉಡುಪಿ ಸೀರೆ, ಇಳಕಲ್ ಸೀರೆ, ಬಿದಿರಿನ ಕಲಾಕೃತಿ, ಮೈಸೂರು ರೇಷ್ಮೆ, ಕೆತ್ತನೆಗಳು, ಕಸೂತಿ, ಪಾರಂಪರಿಕ ಚಿತ್ರಕಲೆ, ಹಿತ್ತಾಳೆ ಪಾತ್ರೆ, ಮೊಳಕಾಲ್ಮೂರು ಸೀರೆ, ಲಂಬಾಣಿ ಕಸೂತಿ, ಮೈಸೂರಿನ ರೇಷ್ಮೆ, ಬಿದಿರು ಕಲಾಕೃತಿ ಸೇರಿ ಒಟ್ಟಾರೆ 16 ಕರಕುಶಲ ವಸ್ತುಗಳನ್ನು ಅನಾವರಣಗೊಳಿಸಲಾಗುತ್ತದೆ. ಹಾಗೂ ಕರ್ನಾಟಕವು ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂದಿದ್ದಾರೆ. * ಪ್ರಸ್ತುತ 12 ರಾಜ್ಯಗಳ ಪೈಕಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರ ಇದಾಗಿದೆ, ಹಾಗೂ ಪ್ರಸ್ತುತ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಟ್ಯಾಬ್ಲೋ ವಿಜಯನಗರ ಜಿಲ್ಲೆಯ ಪರಂಪರೆಯನ್ನು ಪ್ರತಿನಿಧಿಸಲಿದೆ. ಅದರಲ್ಲಿನ ಕೋಷ್ಟಕವು ಮಾತಂಗ ಬೆಟ್ಟಗಳು, ದಂತಕಥೆಗಳ ಪ್ರಕಾರ ಹನುಮಂತನ ಮೂಲ, ಕೃಷ್ಣದೇವರಾಯನ ಪಟ್ಟಾಭಿಷೇಕ ಹಾಗೂ ಹಜಾರ ರಾಮ ದೇವಾಲಯದ ಮ್ಯೂರಲ್ ದೃಶ್ಯಗಳನ್ನು ಪ್ರದರ್ಶನ ಮಾಡಲಿದೆ ಎಂದಿದ್ದಾರೆ. * ಇದೀಗ ಹಂಪಿಯನ್ನು 'ವಿಶ್ವ ಪರಂಪರೆಯ ತಾಣ' ಎಂದು ಟ್ಯಾಗ್ ಮಾಡಲಾಗಿದೆ, ಅಷ್ಟೇ ಅಲ್ಲದೇ ವಿಶ್ವದ ಅತಿದೊಡ್ಡ ತೆರೆದ ವಸ್ತುಸಂಗ್ರಹಾಲಯ ಎಂಬ ಸ್ಥಾನವನ್ನು ಪಡೆದುಕೊಂಡಿದೆ. * ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿ ಪ್ರದೇಶದಲ್ಲಿ ವಿಜಯನಗರ ಸಾಮ್ರಾಜ್ಯವು ನೆಲೆಯಾಗಿತ್ತು, ಈ ಸಾಮ್ರಾಜ್ಯವನ್ನು 1336 ರಲ್ಲಿ ಹರಿಹರ ಮತ್ತು ಬುಕ್ಕಾ ಸಹೋದರರು ಸ್ಥಾಪಿಸಿದ್ದಾರೆ. ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. * ಪ್ರಸ್ತುತ ವಿಜಯನಗರ ಜಿಲ್ಲೆಯು ಕರ್ನಾಟಕದ 31 ನೇ ಜಿಲ್ಲೆಯಾಗಿದೆ.