Job Description: * ಇತ್ತೀಚಿಗೆ ಮಿಸ್ ಇಂಡಿಯಾ ವರ್ಲ್ಡ್ ನವದೀಪ್ ಕೌರ್ ಅವರು ಮಿಸ್ ವರ್ಲ್ಡ್ 2022 ರಲ್ಲಿ ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ ಪ್ರಶಸ್ತಿಯನ್ನು (Best National Costume Award) ಜಯಿಸಿಕೊಂಡಿದ್ದಾರೆ. ಇವರು ಅಚ್ಚರಿಯಾಗುವ ಕುಂಡಲಿನಿ ಚಕ್ರ-ಪ್ರೇರಿತ ಉಡುಗೆಯನ್ನು ಧರಿಸಿರುವದರಿಂದ ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ ಪ್ರಶಸ್ತಿಯನ್ನು ಜಯಿಸಿದ್ದಾರೆ ಎಂದು ತಿಳಿದು ಬಂದಿದೆ. * ಕೌರ್ ಅವರ ಗೋಲ್ಡನ್ ವೇಷಭೂಷಣವು ದೈತ್ಯಾಕಾರದ ಹಾವಿನ ತಲೆ ಮತ್ತು ಹಾವಿನ-ರೀತಿಯ ವಿನ್ಯಾಸಗೊಳಿಸಿರುವ ವೇಷಭೂಷಣ ಧರಿಸಿದ್ದರು, ಹಾಗು ಅದರ ಜೊತೆ ಹಾವಿನ ಬೆತ್ತವನ್ನು ಹಿಡಿದಿದ್ದರು ಇದನ್ನು ಕಲಾವಿದ ಎಗ್ಗೀ ಜಾಸ್ಮಿನ್ ಅವರು ವಿನ್ಯಾಸಗೊಳಿಸಿದ್ದರು. * ಪ್ರಸ್ತುತ ಭಾರತವನ್ನು ಪ್ರತಿನಿಧಿಸುವ ನವದೀಪ್ ಕೌರ್ ಅವರು ಮಿಸೆಸ್ ಇಂಡಿಯಾ ವರ್ಲ್ಡ್ 2022ರಲ್ಲಿ ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ ಪ್ರಶಸ್ತಿ ಪಡೆದಿದ್ದಾರೆ. ಇವರು ಧರಿಸಿರುವ ಪ್ರತಿ ಸೌಂದರ್ಯ ಸ್ಪರ್ಧೆಯು ರಾಷ್ಟ್ರೀಯ ಉಡುಪನ್ನು/ರಾಷ್ಟ್ರೀಯ ವೇಷಭೂಷಣವನ್ನು ಹೊಂದಿದ್ದಾರೆ, ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ವೇಷಭೂಷಣದ ಮೂಲಕ ತಮ್ಮ ನಾಡಿನ ಸಾಂಸ್ಕೃತಿಕ ಅಥವಾ ಆಧ್ಯಾತ್ಮಿಕ ಅಂಶಗಳನ್ನು ಈ ಸ್ಪರ್ಧೆಯಲ್ಲಿ ಪ್ರದರ್ಶನ ಮಾಡಿದ್ದಾರೆ. * ಪ್ರಸ್ತುತ 2022 ರಲ್ಲಿ ಶ್ರೀಮತಿ ನವದೀಪ್ ಕೌರ್ ಅವರು ಮಿಸೆಸ್ ಇಂಡಿಯಾ ವರ್ಲ್ಡ್ 2021 ರ ಕಿರೀಟವನ್ನು ಪಡೆದುಕೊಂಡಿದ್ದಾರೆ, ಇತ್ತೀಚಿಗೆ US ನ ಲಾಸ್ ವೇಗಾಸ್‌ನಲ್ಲಿ ಜರುಗಿದ ಮಿಸೆಸ್ ವರ್ಲ್ಡ್ 2022 ರಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ, ಅವರು ಕುಂಡಲಿನಿ ಚಕ್ರದಂತೆ ವೇಷಭೂಷಣ ರೌಂಡ್'ನಲ್ಲಿ ಅಂತಿಮವಾಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ, ಎಂದು ಮಿಸೆಸ್ ಇಂಡಿಯಾದ ಅಧಿಕೃತ ಹ್ಯಾಂಡಲ್ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. * ಈ ನವದೀಪ್ ಕೌರ್ ಅವರು 'ಅವಂತ್-ಗಾರ್ಡ್ ವೇಷಭೂಷಣದಲ್ಲಿ' ಪೋಸ್ ನೀಡಿದ್ದಾರೆ, ಯೋಗದ ತಿಳುವಳಿಕೆಯ ಪ್ರಕಾರ, ಕುಂಡಲಿನಿಯು ದೇಹದ ಚಕ್ರ ಹಾಗೂ ನಾಡಿಗಳಲ್ಲಿ ಸಂಭವಿಸುತ್ತದೆ ಎಂದು ತಿಳಿಸಲಾಗಿದೆ. ಕೌರ್ ಅವರ ಅಸಾಂಪ್ರದಾಯಿಕ ಸಜ್ಜು, ಸಾಂಪ್ರದಾಯಿಕ ಅರ್ಥದಲ್ಲಿ, ದೇಹದಲ್ಲಿ ವಿವಿಧ ಶಕ್ತಿಗಳ ಚಲನೆಯನ್ನು ಉತ್ತೇಜಿಸುವ ಚಕ್ರಗಳನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಿದ್ದಾರೆ. * ಕೌರ್ ಅವರು ಒಡಿಶಾದ ಸುಂದರ್‌ಗಢ್ ಜಿಲ್ಲೆಯ ಕಾನ್ಸಬಹಾಲ್‌ ನವರಾಗಿದ್ದಾರೆ.