Job Description: * ಪ್ರಸ್ತುತ ಭಾರತವು ಇದೇ 2022 ರ ಜನೇವರಿ. 03 ರಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ (covid-19) ಲಸಿಕೆಯನ್ನು ನೀಡಲು ಆರಂಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ, ಹಾಗೂ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ 'ಮುನ್ನೆಚ್ಚರಿಕೆ ಡೋಸ್'ನ್ನು ಇದೇ 2022 ರ ಜನೇವರಿ.10 ರಿಂದ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಇದೀಗ 60 ವರ್ಷಕ್ಕಿಂತ ಮೇಲ್ಪಟ್ಟ ಕೊಮೊರ್ಬಿಡಿಟಿ (conorbididities)ಹೊಂದಿರುವ ಜನರು ಇದೇ 2022 ರ ಜನೇವರಿ. 10 ರಿಂದ ಮುನ್ನೆಚ್ಚರಿಕೆಯ ಪ್ರಮಾಣದಲ್ಲಿ ಕೋವಿಡ್-19 ಲಸಿಕೆಗಳನ್ನು ಪಡೆಯಬಹುದಾಗಿದೆ, ಇದೀಗ ಭಾರತದಲ್ಲಿ ಈ ಲಸಿಕೆಯ ಡೋಸ್'ನ್ನು ಬೂಸ್ಟರ್ ಡೋಸ್ ಅಲ್ಲ "ಮುನ್ನೆಚ್ಚರಿಕೆ ಡೋಸ್" ಎಂದು ಕರೆಯುತ್ತಾರೆ. * ಪ್ರಧಾನಿ ಮೋದಿ ಅವರು ಓಮಿಕ್ರಾನ್‌'ನಿಂದ ಭಯಭೀತರಾಗುವುದು ಬೇಡ ಹಾಗೂ ಕೋವಿಡ್ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂದಿದ್ದಾರೆ, ಇದೀಗ ಈ ಕೋವಿಡ್'ನ ಹೊಸ ಓಮಿಕ್ರೋನ್ ತಳಿಯಿಂದಾಗಿ ವಿವಿಧ ರಾಷ್ಟ್ರಗಳಲ್ಲಿ ಸೋಂಕುಗಳು ಪ್ರಕಾರವು ಹೆಚ್ಚುತ್ತಿವೆ, ಆದರೆ ಭಾರತೀಯ ಪ್ರಜೆಗಳು ಗಾಬರಿಯಾಗುವುದು ಬೇಡ ಕೋವಿಡ್'ನ ನಿಯಮಗಳನ್ನು ಪಾಲಿಸಿ ಎಂದಿದ್ದಾರೆ. * ಸದ್ಯ ಭಾರತದಲ್ಲಿ 18 ಲಕ್ಷ ಪ್ರತ್ಯೇಕ ಹಾಸಿಗೆಗಳು, 5 ಲಕ್ಷ ಆಮ್ಲಜನಕ ಹಾಸಿಗೆಗಳು, ಹಾಗೂ 1.4 ಲಕ್ಷ ICU ಹಾಸಿಗೆಗಳಿವೆ, ಇದಷ್ಟೇ ಅಲ್ಲದೇ ಮಕ್ಕಳಿಗಾಗಿ 90,000 ವಿಶೇಷ ಹಾಸಿಗೆಗಳನ್ನು ಕಾಯಿದಿರಸಲಾಗಿದೆ ಎಂದು ತಿಳಿಸಿದ್ದಾರೆ. * ಸದ್ಯ ಭಾರತದಲ್ಲಿ ಶೇ. 61 ಕ್ಕಿಂತ ಹೆಚ್ಚು ವಯಸ್ಕ ಜನಸಂಖ್ಯೆಯ ಜನರು ಕೋವಿಡ್-19 ನ ಎರಡೂ ಡೋಸ್ ಲಸಿಕೆಗಳನ್ನು ಪಡೆದಿದ್ದಾರೆ, ಹಾಗೂ ಸುಮಾರು 90 ಪ್ರತಿಶತದಷ್ಟು ವಯಸ್ಕ ಜನಸಂಖ್ಯೆಯ ಜನರು ಕೋವಿಡ್-19 ನ ಮೊದಲನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ, ಇದೀಗ ಭಾರತದಲ್ಲಿ 141 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.