Job Description: * ಪ್ರಸ್ತುತ ವಿಶ್ವದ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕವಾಗಿರುವ ನಾಸಾ(NASA)ದ 'ಜೇಮ್ಸ್‌ ವೆಬ್‌' ಬಾಹ್ಯಾಕಾಶ ಟೆಲಿಸ್ಕೋಪ್ ಉಪಗ್ರಹವನ್ನು ಫ್ರೆಂಚ್ ಗಗನಯಾನ ಉಡಾವಣೆ ನೆಲೆಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಇದು ಸುಮಾರು 9.3 ಲಕ್ಷ ಮೈಲಿ ಎತ್ತರದ ಕಕ್ಷೆಯಲ್ಲಿ ಇದನ್ನು ನೆಲೆಸಲಾಗುತ್ತದೆ, ಇದನ್ನು ಕಕ್ಷೆಗೆ ತಲುಪಿಸಲು ಸುಮಾರು ಒಂದು ತಿಂಗಳು ಕಾಲಾವಕಾಶ ಬೇಕಾಗಲಿದೆ ಎಂದಿದ್ದಾರೆ, ಈ ವಿಶ್ವದ ಶಕ್ತಿಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್'ಗೆ ಸುಮಾರು 75 ಸಾವಿರ ಕೋಟಿ ರೂ. ವೆಚ್ಚ ತಗುಲಲಿದೆ ಎಂದಿದ್ದಾರೆ. * ಪ್ರಸ್ತುತ ಯುರೋಪ್ ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆಗಳ ಜಂಟಿಯಾಗಿ ನಾಸಾದ ಈ ಯೋಜನೆಯನ್ನು ಕೈಗೊಂಡಿದೆ, ಈ ಟೆಲಿಸ್ಕೋಪ್ ಬಾಹ್ಯಾಕಾಶದಿಂದಲೇ ಭೂಮಿ ಮೇಲೆ ಹಾರಾಡುತ್ತಿರುವ ಪಕ್ಷಿಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಹಿಂದೆ 1990ರಲ್ಲಿ ಉಡಾವಣೆ ಮಾಡಲಾದ ಹಬಲ್ ಟೆಲಿಸ್ಕೋಪ್ ಉಪಗ್ರಹಕ್ಕಿಂತಲೂ 100 ಪಟ್ಟು ಅಧಿಕ ಬಲಿಷ್ಠ ಉಪಗ್ರಹವಾಗಿದೆ. * ಪ್ರಸ್ತುತ ಇದು ಅಮೇರಿಕ ಇತಿಹಾಸದಲ್ಲೇ ದೊಡ್ಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ಯೋಜನೆ ಇದಾಗಿದೆ, ಈ ಯೋಜನೆ ನಾಸಾದ 2ನೇ ಮುಖ್ಯಸ್ಥರ ಹೆಸರನ್ನು ಇಡಲಾಗಿದೆ ಅದುವೇ ಜೇಮ್ಸ್ ವೆಬ್. * ಈ ಯೋಜನೆಯ ಉದ್ದೇಶವು ಭೂಮಿಯ ಉಗಮವಾದ ಸಂದರ್ಭದಲ್ಲಿ ಇದ್ದ ಗ್ಯಾಲೆಕ್ಸಿಗಳು, ಉಲ್ಕೆಗಳು, ಗ್ರಹಗಳ ಬಗೆಗಿನ ಅಧ್ಯಯನವನ್ನು ಮಾಡುತ್ತದೆ, ಹಾಗೂ ಬ್ರಹ್ಮಾಂಡದ ಸೃಷ್ಟಿಯ ಬಗೆಗಿನ ಅನೇಕ ವಿಷಯಗಳನ್ನು ಬಹಿರಂಗಪಡಿಸಲಿದೆ ಎಂದಿದ್ದಾರೆ, ಹಾಗೂ ಇದು ಬಾಹ್ಯಾಕಾಶದಿಂದಲೇ ಬೇರ್ ಬೇರೆ ಗ್ರಹಗಳ ಬಗ್ಗೆ ಅಧ್ಯಯನವನ್ನು ನಡೆಸಿ ಅಗತ್ಯವಿರುವ ಮಾಹಿತಿ, ಫೋಟೊಗಳನ್ನು ಸಂಗ್ರಹಿಸಿ ನಿಯಂತ್ರಣಾ ಕೇಂದ್ರಕ್ಕೆ ರವಾನಿಸಿದೆ ಎಂದಿದ್ದಾರೆ. * ಈ ಹಿಂದೆ 1990ರಲ್ಲಿ ಉಡಾವಣೆ ಮಾಡಲಾಗಿರುವ ಹಬಲ್ ಟೆಲಿಸ್ಕೋಪ್'ನ ಸ್ಥಳವನ್ನು ಈ ಜೇಮ್ಸ್ ವೆಬ್ ಉಪಗ್ರಹ ತುಂಬಲಿದೆ, ಇಲ್ಲಿಯವರೆಗೆ 1990ರಲ್ಲಿ ಉಡಾವಣೆಯಾಗಿರುವ ಹಬಲ್ ಟೆಲಿಸ್ಕೋಪ್ ಸಹಾಯದಿಂದ ಭೂಮಿಯ ಬಗ್ಗೆ ಅಧ್ಯಯನ ಮಾಡಲಾಗಿತ್ತು, ಇತ್ತೀಚಿಗಷ್ಟೇ ಈ ಹಬಲ್ ಟೆಲಿಸ್ಕೋಪ್ ಕೆಲ ತಾಂತ್ರಿಕ ದೋಷಗಳಿಂದಾಗಿ ತನ್ನ ಕೆಲಸ ಸ್ಥಗಿತಗೊಳಿತ್ತು, ಈ ಕಾರಣದಿಂದಾಗಿ ಈ ಜೇಮ್ಸ್ ವೆಬ್ ಯೋಜನೆಯನ್ನು ಮಾಡಲಾಗಿದೆ ಎಂದು ನಾಸಾ ತಿಳಿಸಿದೆ.