Job Description: * ಪ್ರಸ್ತುತ ಭಾರತೀಯ ಅಂಧರ ಕ್ರಿಕೆಟ್‌ ತಂಡವು ಇದೀಗ ಅಂಧರ ಟ್ವೆಂಟಿ20 ಕ್ರಿಕೆಟ್ ಸರಣಿಯಲ್ಲಿನ ಎಲ್ಲ ಪಂದ್ಯಗಳಲ್ಲೂ ಬಾಂಗ್ಲಾದೇಶದ ಅಂಧರ ಕ್ರಿಕೆಟ್‌ ತಂಡದ ವಿರುದ್ಧ ಜಯ (ಕ್ಲೀನ್‌ ಸ್ಲೀಪ್ ಮಾಡಿದೆ) ಸಾಧಿಸಿದೆ. * ಈ ಅಂಧರ ಟ್ವೆಂಟಿ20 ಕ್ರಿಕೆಟ್ ಸರಣಿಯನ್ನು ಮಧ್ಯೆ ಪ್ರದೇಶದ ಭೋಪಾಲ್‌ನಲ್ಲಿ ಅಂಧರ ಕ್ರಿಕೆಟ್ ಸಂಸ್ಥೆ ಹಾಗೂ ಸಿಎಬಿಎಂಪಿ ಆಯೋಜಿಸಿದ್ದವು, ಈ ಸರಣಿಯ '3' ಪಂದ್ಯಗಳ ಸರಣಿಯಲ್ಲಿ ಭಾರತದ ಅಂಧರ ಕ್ರಿಕೆಟ್ ತಂಡವು ಮೊದಲ ಪಂದ್ಯದಲ್ಲಿ ಭಾರತ 124 ರನ್‌ಗಳಿಂದ, ಹಾಗೂ 2ನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ, ಹಾಗೂ 3ನೇ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಅಂತಿಮವಾಗಿ ಜಯ ಗಳಿಸಿದೆ. * ಈ ಸರಣಿಯಲ್ಲಿ ಭಾರತದ ಬಿ1 ವಿಭಾಗದ, ಕಲ್ಪೇಶ್ ನಿಂಬಾಡ್ಕರ್‌, ಬಿ2 ವಿಭಾಗದ, ವೆಂಕಟೇಶ್ವರ ರಾವ್‌, ಹಾಗೂ ಬಿ3 ವಿಭಾಗದ ಪ್ರಕಾಶ್ ಜಯರಾಮಯ್ಯ ಅವರಿಗೆ ಸರಣಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಿ ತಲಾ 10,000 ರೂ. ನೀಡಲಾಯಿತು. * ಅಂಧರ ಕ್ರಿಕೆಟ್: ಇದೊಂದು ಕುರುಡು ಮತ್ತು ಭಾಗಶಃ ದೃಷ್ಟಿ ಹೊಂದಿರುವ ಆಟಗಾರರಿಗೆ ಅಳವಡಿಸಲಾದ ಕ್ರಿಕೆಟ್'ನ ಒಂದು ಆವೃತ್ತಿಯಾಗಿದೆ, ಇದನ್ನು ಈ ಹಿಂದೆ 1996 ರಿಂದ ವಿಶ್ವ ಅಂಧರ ಕ್ರಿಕೆಟ್ ಕೌನ್ಸಿಲ್ (WBCC) ನಿಯಂತ್ರಿಸುತ್ತದೆ. * ಪ್ರಸ್ತುತ ಇಲ್ಲಿಯತನಕ '5' ಅಂಧರ ವಿಶ್ವಕಪ್‌ಗಳನ್ನು ನಡೆಸಲಾಗಿದೆ, 2012 ರಲ್ಲಿ, ಮೊದಲ ಅಂಧರ ವಿಶ್ವಕಪ್ ಟಿ20'ಯನ್ನು ಭಾರತದಲ್ಲಿ ಬೆಂಗಳೂರಿನಲ್ಲಿ ನಡೆಸಲಾಗಿದೆ. * ಈ ಅಂಧರ ಕ್ರಿಕೆಟ್'ಅನ್ನು 1922 ರಲ್ಲಿ ಮೆಲ್ಬೋರ್ನ್‌ನಲ್ಲಿ ಇಬ್ಬರು ಕುರುಡು ಕಾರ್ಖಾನೆಯ ಕೆಲಸಗಾರರು ಕಂಡುಹಿಡಿದಿದ್ದಾರೆ, ವಿಕ್ಟೋರಿಯನ್ ಬ್ಲೈಂಡ್(ಅಂಧರ) ಕ್ರಿಕೆಟ್ ಅಸೋಸಿಯೇಷನ್ 'ನ್ನು 1922 ರಲ್ಲಿ ಸ್ಥಾಪನೆ ಮಾಡಲಾಯಿತು, ಹಾಗೂ ಇವರಿಗಾಗಿ ಮೊದಲ ಕ್ರೀಡಾ ಮೈದಾನ ಮತ್ತು ಕ್ಲಬ್‌ಹೌಸ್'ನ್ನು 1928 ರಲ್ಲಿ ಮೆಲ್ಬೋರ್ನ್‌ನ ಕೂಯಾಂಗ್‌ನಲ್ಲಿ ನಿರ್ಮಾಣಮಾಡಲಾಗಿದೆ. * ಈ ಹಿಂದೆ 2000 ರಲ್ಲಿ ವಿಶ್ವದ ಮೊದಲ ಅಂಧರ ಟೆಸ್ಟ್ ಕ್ರಿಕೆಟ್ ಪಂದ್ಯವು ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಜರುಗಿತು, ಆ ಪಂದ್ಯದಲ್ಲಿ ಪಾಕಿಸ್ತಾನತಂಡವು ದಕ್ಷಿಣ ಆಫ್ರಿಕಾ ತಂಡವನ್ನು 94 ರನ್‌ಗಳಿಂದ ಸೋಲಿಸಿ ಜಯ ಗಳಿಸಿದೆ.