Job Description: * ಪ್ರಸ್ತುತ ಜಪಾನ್ ದೇಶವು ವಿಶ್ವದ ಮೊದಲ ಡ್ಯುಯಲ್ ಮೋಡ್(dual mode) ವಾಹನವನ್ನು ಅಭಿವೃದ್ಧಿ ಪಡಿಸಿದೆ, ಈ ವಾಹನಕ್ಕೆ ಜಪಾನ್‌ನ ಕೈಯೊ ಪಟ್ಟಣದಲ್ಲಿ ರಸ್ತೆಯಲ್ಲಿ ಸಂಚರಿಸಲು ಆರಂಭಿಸಿದೆ, ಜಪಾನ್ ತಯಾರಿಸಿರುವ ಈ ವಾಹನವು ರಸ್ತೆ ಮತ್ತು ರೈಲು ಹಳಿಗಳ ಮೇಲೆ ಚಲಿಸುತ್ತದೆ ಎಂದು ತಿಳಿಸಿದ್ದಾರೆ. * ಈ ಡ್ಯುಯಲ್ ಮೋಡ್ ವಾಹನ (dual mode vehicle)ಮಿನಿಬಸ್'ನ್ನೇ ಹೋಲುತ್ತದೆ, ಈ ಬಸ್ ರಸ್ತೆಗಳಲ್ಲಿ ರಬ್ಬರ್ ಟೈರ್‌ಗಳ ಮೂಲಕ ಚಲಿಸುತ್ತದೆ, ಹಾಗೂ ಉಕ್ಕಿನ ಚಕ್ರಗಳ ಮೂಲಕ ಈ ವಾಹನ ರೈಲು ಹಳಿಗಳ ಮೇಲೆಯು ಚಲಿಸುತ್ತದೆ. * ಈ ಡ್ಯುಯಲ್ ಮೋಡ್ ವಾಹನವು ಸುಮಾರು 21 ಪ್ರಯಾಣಿಕರನ್ನು ಹೊತ್ತು ಸಾಗುವ ಸಾಮರ್ಥ್ಯವನ್ನು ಹೊಂದಿದೆ, ಈ ವಾಹನ ರೈಲು ಹಳಿಗಳ ಮೇಲೆ 60km/h ವೇಗದಲ್ಲಿ ಚಲಿಸುತ್ತದೆ, ಹಾಗೂ ರಸ್ತೆಗಳಲ್ಲಿ ಸರಿ ಸುಮಾರು 100km/h ವೇಗದಲ್ಲಿ ಚಲಿಸುತ್ತದೆ, ಇದು ಡೀಸೆಲ್‌ ಚಾಲಿತ ಸಣ್ಣ ವಾಹನವಾಗಿದೆ, ಈ ವಾಹನವು ದಕ್ಷಿಣ ಜಪಾನ್‌ನ ಶಿಕೋಕು ದ್ವೀಪದ ಕರಾವಳಿಯ ಪ್ರದೇಶದಲ್ಲಿ ಚಲಿಸುತ್ತದೆ, ಅಲ್ಲಿನ ಅನೇಕ ಸಣ್ಣ ಪಟ್ಟಣಗಳಿಗೆ ಸಂಪರ್ಕವನ್ನು ನೀಡುತ್ತದೆ.