Job Description: * ಪ್ರಸ್ತುತ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿ ಐಕಾನ್, ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮತ್ತು ದೇಶದ ನೈತಿಕ ದಿಕ್ಸೂಚಿ ಎಂದು ಹೆಸರಿಸಲಾಗುವ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರು ತಮ್ಮ 90 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಾಫೋಸಾ ಅವರು ತಿಳಿಸಿದ್ದಾರೆ. * ಸಾಮಾಜಿಕ ಹೋರಾಟಗಾರರಾಗಿರುವ ಡೆಸ್ಮಂಡ್ ಟುಟು ಅವರು ತಮ್ಮ ದೇಶದಲ್ಲಿ ಬಿಳಿ ಅಲ್ಪಸಂಖ್ಯಾತರ ಆಳ್ವಿಕೆಯನ್ನು ಎದುರಿಸಿದ್ದಕ್ಕಾಗಿ ಇವರಿಗೆ 1984 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿತ್ತು. * ಡೆಸ್ಮಂಡ್ ಎಂಪಿಲೋ ಟುಟು ಅವರು ದಕ್ಷಿಣ ಆಫ್ರಿಕಾದ ಆಂಗ್ಲಿಕನ್ ಬಿಷಪ್ ಮತ್ತು ದೇವತಾಶಾಸ್ತ್ರಜ್ಞರಾಗಿದ್ದರು, ವರ್ಣಭೇದ ನೀತಿ ವಿರೋಧಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸಿದ್ದಾರೆ, ಇವರು 1985 ರಿಂದ 1986 ರವರೆಗೆ ಜೋಹಾನ್ಸ್‌ಬರ್ಗ್‌ನ ಬಿಷಪ್ ಆಗಿದ್ದರು, ಇದಾದ ಬಳಿಕ 1986 ರಿಂದ 1996 ರವರೆಗೆ ಕೇಪ್ ಟೌನ್‌ನ ಆರ್ಚ್‌ಬಿಷಪ್ ಆಗಿದ್ದರು, ಈ ಎರಡೂ ಸ್ಥಾನವನ್ನು ಅಲಂಕರಿಸಿದ ಮೊದಲ ಕಪ್ಪು ಆಫ್ರಿಕನ್ ಇವರಾಗಿದ್ದಾರೆ. * ದಕ್ಷಿಣ ಆಫ್ರಿಕಾದ ಡೆಸ್ಮಂಡ್ ಟುಟು 1931 ರ ಅಕ್ಟೋಬರ್. 07 ರಂದು ದಕ್ಷಿಣ ಆಫ್ರಿಕಾದ ಕ್ಲರ್ಕ್ಸ್‌ಡಾರ್ಪ್ ಎಂಬಲ್ಲಿ ಜನಿಸಿದ್ದಾರೆ, ಇದೀಗ ಇವರು 2021 ರ ಡಿಸೆಂಬರ್. 26 ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್'ನಲ್ಲಿ ನಿಧನರಾಗಿದ್ದಾರೆ.