Job Description: * ಪ್ರಸ್ತುತ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡವು ತಮಿಳುನಾಡು ತಂಡದ ವಿರುದ್ಧದ ಫೈನಲ್ ಪಂದ್ಯದಲ್ಲಿ ಜಯ ಗಳಿಸಿದೆ, ಪ್ರಸ್ತುತ ಹಿಮಾಚಲ ಪ್ರದೇಶ ತಂಡವು ದೇಶಿ ಕ್ರಿಕೆಟ್ ನಲ್ಲಿ ತನ್ನ ಮೊದಲ ಟ್ರೋಫಿಯನ್ನು ಗೆದ್ದಿದೆ. * ರಿಷಿ ಧವನ್ ನಾಯಕತ್ವದ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಬಲಿಷ್ಠ * ಪ್ರಸ್ತುತ ತಮಿಳುನಾಡು ತಂಡವು 49.4 ಓವರ್ ಗಳಲ್ಲಿ ತಂಡದ ಎಲ್ಲಾ ವಿಕೆಟ್'ಗಳನ್ನೂ ಕಳೆದುಕೊಂಡು 314 ರನ್'ಗಳ ಟಾರ್ಗೆಟ್ ನೀಡಿತ್ತು, ಈ ಗುರಿಯನ್ನು ಹಿಮಾಚಲ ಪ್ರದೇಶ ತಂಡ ಕೇವಲ 47.3 ಓವರ್'ಗಳಲ್ಲಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು 299 ರನ್ ಕಲೆಹಾಕಿತು, ಇದಾದ ಬಳಿಕ ಪಂದ್ಯ ಮುಂದುವರೆಯಬೇಕು ಸಂಧರ್ಭದಲ್ಲಿ ಮಂದ ಬೆಳಕು ಅಡ್ಡಿಯಾದ ಕಾರಣ ಅಂಪೈರ್`ಗಳು ಈ ಪಂದ್ಯವನ್ನು ವಿಜೆಡಿ ನಿಯಮದ ಪ್ರಕಾರ ಅಂತ್ಯಗೊಳಿಸಿದರು, ಹೀಗಾಗಿ ಹಿಮಾಚಲ ಪ್ರದೇಶ ತಂಡವು 11 ರನ್ ಅಂತರದ ಗೆಲುವು ಸಾಧಿಸಿದೆ ಎಂದು ಅಂಪೈರ್`ಗಳು ಘೋಷಣೆ ಮಾಡಿದರು. * ಈ ಹಿಂದೆ ತಮಿಳುನಾಡು ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಜಯಿಸಿತ್ತು, ಆದರೆ ಈ ವಿಜಯ್ ಹಜಾರೆ ಟ್ರೋಫಿ ಫೈನಲ್'ನಲ್ಲಿ ಸೋಲು ಕಂಡಿದೆ. * ಪ್ರಸ್ತುತ ಈ ವಿಜಯ್ ಹಜಾರೆ ಟ್ರೋಫಿಯನ್ನು ರಣಜಿ ಏಕದಿನ ಟ್ರೋಫಿ ಎಂದೂ ಕರೆಯುತ್ತಾರೆ, ಈ ಟ್ರೋಫಿಯನ್ನು ಈ ಹಿಂದೆ 2002-03 ರಲ್ಲಿ ರಣಜಿಯ ರಾಜ್ಯ ತಂಡಗಳನ್ನು ಸೇರಿಸಿ ಸೀಮಿತ ಓವರ್‌ಗಳ ಕ್ರಿಕೆಟ್ ದೇಶೀಯ ಸ್ಪರ್ಧೆಯಾಗಿ ಆರಂಭಿಸಲಾಯಿತು, ಹಾಗು ಇದಕ್ಕೆ ಭಾರತೀಯ ಕ್ರಿಕೆಟಿಗ ವಿಜಯ್ ಹಜಾರೆ ಅವರ ಹೆಸರನ್ನು ಇಟ್ಟಿದ್ದಾರೆ. * ತಮಿಳುನಾಡು ತಂಡವು 5 ಬಾರಿ ಈ ವಿಜಯ್ ಹಜಾರೆ ಟ್ರೋಫಿ ಗೆದ್ದ ಅತ್ಯಂತ ಯಶಸ್ವಿ ತಂಡವಾಗಿದೆ, ಹಿಮಾಚಲ ಪ್ರದೇಶವು ತಂಡವು ಈ ಬಾರಿ ಚಾಂಪಿಯನ್'ಆಗಿದೆ ಹಾಗು ಇದು ಹಿಮಾಚಲ ಪ್ರದೇಶವು ತಂಡದ 1 ನೇ ಪ್ರಶಸ್ತಿಯಾಗಿದೆ.