Job Description: * ಇದೀಗ ಅಸ್ಸಾಂ ವಿಧಾನ ಸಭೆಯಲ್ಲಿ ಜಾನುವಾರು ಸಂರಕ್ಷಣೆ (ತಿದ್ದುಪಡಿ) ವಿಧೇಯಕವನ್ನು ಅಧಿವೇಶನದ ಸಂದರ್ಭ ಅಂಗೀಕರಿಸಿದ್ದಾರೆ, ಈ ತಿದ್ದುಪಡಿಯ ಮೂಲಕ ಎರಡು ಪ್ರಮುಖ ಬದಲಾವಣೆಗಳನ್ನೂ ಮಾಡಿದ್ದಾರೆ, ಅವುಗಳು ಒಂದು ತಿದ್ದುಪಡಿಯಲ್ಲಿ ದೋಣಿ ಮತ್ತು ಹಡಗು ವಶಪಡಿಸಿಕೊಂಡ ವಾಹನಗಳು ಮತ್ತು ಸಾಗಾಟ ಸಾಧನಗಳನ್ನು ವಿಚಾರಣೆ ಮತ್ತು ತನಿಖೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡಲು ನ್ಯಾಯಾಲಯಕ್ಕೆ ಅವಕಾಶ ನೀಡಲಿದೆ ಎಂದಿದ್ದಾರೆ. * ಮತ್ತೊಂದು ತಿದ್ದುಪಡಿಯಲ್ಲಿ ಗಡಿ ಜಿಲ್ಲೆಗಳನ್ನು ಹೊರತುಪಡಿಸಿ ಅಂತರ್ ಜಿಲ್ಲೆಗಳಿಗೆ ಜಾನುವಾರುಗಳ ಸಾಗಾಟಕ್ಕೆ ಅವಕಾಶವನ್ನು ನೀಡಲಾಗುತ್ತದೆ ಎಂದಿದ್ದಾರೆ. * ಈ ತಿದ್ದುಪಡಿಯ ಮೂಲಕ ಅಸ್ಸಾಂ ಮುಖ್ಯಮಂತ್ರಿ, ಡಾ. ಹಿಮಾಂತ ಬಿಸ್ವಾ ಶರ್ಮಾ ಅವರು ರಾಜ್ಯದಲ್ಲಿ ಗೋ ಹತ್ಯೆಗೆ ಅಂತ್ಯ ಹಾಡಲು ಇಚ್ಛಿಸಿದ್ದೇವೆ ಎಂದಿದ್ದಾರೆ, ಅಷ್ಟೇ ಅಲ್ಲದೇ ಕೃಷಿ ಹಾಗೂ ಜನರ ಜೀವನಉಪಯೋಗದ ಉದ್ದೇಶಕ್ಕಾಗಿ ಜಾನುವಾರುಗಳನ್ನೂ ಬಳಸಿಕೊಳ್ಳಲು ಯಾವುದೇ ನಿರ್ಬಂಧ ಹೇರುವದಿಲ್ಲ ಎಂದು ತಿಳಿಸಿದ್ದಾರೆ, ಇದೇಲ್ಲದರ ನಡುವೆ ಬಾಂಗ್ಲಾದೇಶದ ಗಡಿ ಭಾಗದಲ್ಲಿನ ಜಿಲ್ಲೆಗಳಿಗೆ ಜಾನುವಾರುಗಳನ್ನು ಸಾಗಾಟ ಮಾಡುವುದನ್ನು ತಡೆಯಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಯಾವುದೇ ಪರವಾನಿಗೆ ಇಲ್ಲದೇ ಜಾನುವಾರು ಸಾಗಣೆ ಮಾಡುತ್ತಿದ್ದರೇ ಆ ವಾಹನಗಳನ್ನು ವಶಕ್ಕೆ ಪಡೆಯಲು ಹಾಗೂ ಅವರ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಅನುಮತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.