Job Description: * ಪ್ರಸ್ತುತ ಚೀನಾದಲ್ಲಿ ಸರಿ ಸುಮಾರು 60 ರಿಂದ 70 ಮಿಲಿಯನ್ ವರ್ಷಗಳ ಹಿಂದಿನ ಡೈನೊಸಾರ್ ಭ್ರೂಣವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ, ಈ ವಿಶ್ವದ ಇತಿಹಾಸದಲ್ಲೇ ಕಂಡು ಬಂದ ಅತ್ಯುತ್ತಮ ಡೈನೋಸಾರ್ ಭ್ರೂಣ ಎಂದು ತಿಳಿಸಿದ್ದಾರೆ. ಪ್ರಸ್ತುತ ಈ ಡೈನೋಸಾರ್ ಭ್ರೂಣವನ್ನು ದಕ್ಷಿಣ ಚೀನಾದ ಗಂಝೋದಲ್ಲಿ ಪತ್ತೆಹಚ್ಚಲಾಗಿದೆ ಎಂದು ಸಂಶೋಧಕ ಡಾ. ಫಿಯಾನ್ ವೈಸಮ್ ಮಾ ತಿಳಿಸಿದ್ದಾರೆ. * ಪತ್ತೆಯಾಗಿರುವ ಈ ಡೈನೋಸಾರ್ ಭ್ರೂಣ ಸರಿ ಸುಮಾರು 66 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ, ಇದು ಹಲ್ಲುಗಳಿಲ್ಲದ ಥೆರೋಪಾಡ್ ಡೈನೋಸಾರ್ ಅಥವಾ ಓವಿರಾಪ್ಟೊರೊಸಾರ್ ಎನ್ನುವ ಭ್ರೂಣವಾಗಿದೆ, ಸದ್ಯ ಈ ಭ್ರೂಣಕ್ಕೆ ಬೇಬಿ ಯಿಂಗ್ಲಿಯಾಂಗ್ ಎಂದು ಹೆಸರಿಡಲಾಗಿದೆ. * ಪ್ರಸ್ತುತ ಈ ಭ್ರೂಣವನ್ನು ಚೀನಾದ ಯಿಂಗ್ಲಿಯಾಂಗ್ ಸ್ಟೋನ್ ನೇಚರ್ ಹಿಸ್ಟರಿ ವಸ್ತುಸಂಗ್ರಾಲಯದಲ್ಲಿ 6.7 ಇಂಚು ಉದ್ದದ ಮೊಟ್ಟೆಯೊಳಗೆ ಇದನ್ನು ಇಡಲಾಗಿತ್ತು, ಈ ಮೊಟ್ಟೆಯನ್ನು ಈ ಹಿಂದೆ 2000 ರಲ್ಲಿ ಮೊದಲ ಬಾರಿ ಹೊರಗೆ ತೆಗೆಯಲಾಯಿತು, ಇದನ್ನು ಸುಮಾರು 10 ವರ್ಷಗಳ ಕಾಲ ಶೇಖರಣೆಯಲ್ಲಿ ಇಡಲಾಗಿತ್ತು. * ಇದೀಗ ಪತ್ತೆಯಾಗಿರುವ ಬೇಬಿ ಯಿಂಗ್ಲಿಯಾಂಗ್ ಎಂಬ ಹೆಸರಿನ ಡೈನೊಸಾರ್ ತಲೆಯಿಂದ ಬಾಲದವರೆಗೆ ಸರಿ ಸುಮಾರು 10.6 ಇಂಚು ಉದ್ದವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.