Job Description: * ಪ್ರಸ್ತುತ ಭಾರತದ ಪೌರತ್ವಕ್ಕಾಗಿ ಸರಿ ಸುಮಾರು 7,306 ಜನ ಪಾಕಿಸ್ತಾನಿಯರು ಅರ್ಜಿಯನ್ನು ಸಲ್ಲಿಸಿದ್ದಾರೆ, ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೀಡಿರುವ ಅಂಕಿಅಂಶದಲ್ಲಿ ತಿಳಿದು ಬಂದಿದೆ. * ಪ್ರಸ್ತುತ ಎಷ್ಟು ಜನ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಲೋಕಸಭಾ ಸದಸ್ಯರಾಗಿರುವ ಅಬ್ದುಲ್ ವಾಹಾಬ್ ಅವರು ಪ್ರಶ್ನೆಯನ್ನು ಕೇಳಿದರು ಈ ಪ್ರಶ್ನೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು, 2021 ರ ಡಿಸೆಂಬರ್. 14 ರವರೆಗೆ ಸರಿ ಸುಮಾರು 10,635 ಅರ್ಜಿಗಳು ಭಾರತೀಯ ಪೌರತ್ವಕ್ಕಾಗಿ ಬಂದಿವೆ ಎಂದಿದ್ದಾರೆ, ಅದರಲ್ಲಿಯೂ 7,306 ಅರ್ಜಿಗಳು ಪಾಕಿಸ್ತಾನ ಜನಗಳಿಂದ ಬಂದಿವೆ ಎಂದಿದ್ದಾರೆ. * ಭಾರತೀಯ ಪೌರತ್ವಕ್ಕಾಗಿ ಬಂದಿರುವ ಅರ್ಜಿಗಳ ವಿವರ: ಪಾಕಿಸ್ತಾನ 7,306 ಅರ್ಜಿಗಳು, ಆಫ್ಘಾನಿಸ್ತಾನ್ 1,152 ಅರ್ಜಿಗಳು, ಶ್ರೀಲಂಕಾ ಮತ್ತು ಯುಎಸ್ಎ ರಾಷ್ಟ್ರಗಳಿಂದ 223 ಅರ್ಜಿಗಳು, ಹಾಗೂ ನೇಪಾಳ ರಾಷ್ಟ್ರದಿಂದ 189 ಅರ್ಜಿಗಳು, ಬಾಂಗ್ಲಾದೇಶದಿಂದ 161, ಚೀನಾದಿಂದ 10 ಅರ್ಜಿಗಳು, ಹಾಗೂ ಸ್ಟೇಟ್ ಲೆಸ್(ರಾಜ್ಯ ವಿಲ್ಲದ)ನಿಂದ 428 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ತಿಳಿಸಿದ್ದಾರೆ. * ಪ್ರಸ್ತುತ ಭಾರತೀಯ ಪೌರತ್ವಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಅವುಗಳಿಗೆ ಪೌರತ್ವ ನೀಡುವ ಬಗೆಗಿನ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.