Job Description: * ಇದೀಗ ಕರ್ನಾಟಕ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ತೃತೀಯಲಿಂಗಿಗಳಿಗೆ ಶೇ. 01 ರಷ್ಟು ಮೀಸಲಾತಿಯನ್ನು ಘೋಷಣೆ ಮಾಡಿದೆ. * ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿನ ಎಲ್ಲಾ ಶ್ರೇಣಿಯಲ್ಲೂ ತೃತೀಯಲಿಂಗಿಗಳಿಗೆ ಮೀಸಲಾತಿ ನೀಡಲಾಗುತ್ತದೆ, ಕರ್ನಾಟಕ ಪೊಲೀಸ್ ಇಲಾಖೆಯು ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ನೇಮಕಾತಿವನ್ನು ಮಾಡಿಕೊಳ್ಳಲಾಗುತ್ತಿದೆ. * ಕರ್ನಾಟಕ ರಾಜ್ಯ ಪೊಲೀಸರನ್ನು ತೋಟಿ, ತಳವಾರ, ಕಟ್ಟುಬಿಡಿ, ಉಂಬಳಿದಾರ್, ನೀರಗಂಟಿ, ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿತ್ತು, ರಾಜ್ಯದಲ್ಲಿ ಮೊದಲ ಪೊಲೀಸ್ ಮಹಾನಿರೀಕ್ಷಕರನ್ನು ನೇಮಕ ಮಡಿದ ನಂತರ ಪೊಲೀಸ್ ಸ್ಥಾಪನೆಗೆ ಅಡಿಪಾಯ ಹಾಕಲಾಯಿತು. * ರಾಜ್ಯ ಪೊಲೀಸ್ ಇತಿಹಾಸ: ಮೈಸೂರು ರಾಜ್ಯವು ಕರ್ನಾಟಕ ರಾಜ್ಯ ಎಂದು 1965 ರ ನವೆಂಬರ್. 01 ರಂದು ರಚಿಸಲಾಯಿತು. ರಾಜ್ಯದ ಮೊದಲ ಪೊಲೀಸ್ ಮಹಾನಿರೀಕ್ಷಕರಾಗಿ ಶ್ರೀ. L. ರಿಕೆಟ್ಸ್ ಅವರನ್ನು ನೇಮಕ ಮಾಡಲಾಯಿತು, ಈ ಹಿಂದೆ 1883 ರಲ್ಲಿ ತಳವಾರರು, ತೋಟಿಗಳು, ಕವಲುಗಾರರು, ನೀರಗಂಟಿಗಳು, ಪಟೇಲರು, ಅಮರಗರರು, ಅಂಕಮಾಲೆ, ಶ್ಯಾನುಭೋಗರು, ಇವರೆಲ್ಲರು ಪೋಲೀಸ್ ಕೆಲಸವನ್ನು ಮಾಡುತ್ತಿದ್ದರು. *ಈ ಹಿಂದೆ 1856 ರಲ್ಲಿ ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಯು ಸ್ಥಾಪನೆಯಾಯಿತು, ಹಾಗೂ ನ್ಯಾಯಾಂಗ ಆಯುಕ್ತರನ್ನು ನೇಮಕ ಮಾಡಲಾಯಿತು. ಇದಾದ ಬಳಿಕ 1873 ರಲ್ಲಿ ಕಮಿಷನರ್‌ಗೆ ಸಹಾಯ ಮಾಡುವ ಸಲುವಾಗಿ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್'ರನ್ನು ನೇಮಕ ಮಾಡಲಾಯಿತು, ಅದೇ ಸಂಧರ್ಭಗಳಲ್ಲಿ, ಪ್ರಥಮ ದರ್ಜೆ ಇನ್ಸ್‌ಪೆಕ್ಟರ್, ದ್ವಿತೀಯ ದರ್ಜೆ ಇನ್ಸ್‌ಪೆಕ್ಟರ್, ಹೆಡ್ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ಗಳ ಹುದ್ದೆಗಳನ್ನು ರಚಿಸಲಾಯಿತು. * ಪ್ರಸ್ತುತ ಕೆ. ಪ್ರಿತಿಕಾ ಯಾಶಿನಿ ಅವರು ಭಾರತದ ಮೊದಲ ಟ್ರಾನ್ಸ್ಜೆಂಡರ್ ಮಹಿಳಾ ಪೊಲೀಸ್ ಅಧಿಕಾರಿಯಾಗಿದ್ದಾರೆ, ಇವರು ಇದೀಗ ತಮಿಳುನಾಡಿನಲ್ಲಿ ಸಬ್ ಇನ್ಸ್ ಪೆಕ್ಟರ್ ಕಾರ್ಯ ನಿರ್ವಹಿಸುತ್ತಿದ್ದಾರೆ.