Job Description: * ಪ್ರಸ್ತುತ ಭಾರತೀಯ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಭಾರತವು ಕಂಚಿನ ಪದಕವನ್ನು ಜಯಿಸಿದೆ. * ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ 3 ನೇ ಸ್ಥಾನಕ್ಕಾಗಿ ಪೈಪೋಟಿಯನ್ನು ನಡೆಸಿದ್ದವು ಆ ಪಂದ್ಯದಲ್ಲಿ ಅಂತಿಮವಾಗಿ ಭಾರತದ ಮನಪ್ರೀತ್ ಸಿಂಗ್ ಅವರ ಹಾಕಿ ತಂಡವು 4-3 ಗೋಲುಗಳ ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಜಯಗಳಿಸಿದೆ. * ಈ ಮೊದಲು ಭಾರತೀಯ ಹಾಕಿ ತಂಡವು ಪಾಕಿಸ್ತಾನ ತಂಡದ ವಿರುದ್ಧ ರೌಂಡ್ ರಾಬಿನ್ ಲೀಗ್ ಹಂತದಲ್ಲಿ ನಡೆದ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿದೆ. * ಪ್ರಸ್ತುತ ಭಾರತ ತಂಡವು ಸೆಮಿಫೈನಲ್‌ ಹಂತದಲ್ಲಿ ಜಪಾನ್ ವಿರುದ್ಧ 5-3 ಗೋಲುಗಳ ಅಂತರದ ಸೋಲು ಕಂಡು ಚಿನ್ನದ ಪದಕ ಪಡೆಯುವ ಆಶೆಯನ್ನು ಕಿಬಿಟ್ಟಿತ್ತು, ಆದರೆ ಭಾರತ ತಂಡವು ರೌಂಡ್ ರಾಬಿನ್ ಲೀಗ್‌ನಲ್ಲಿ 6-0 ಯಿಂದ ಜಪಾನ್ ತಂಡದ ವಿರುದ್ಧ ಜಯಗಳಿಸಿತ್ತು. * ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯು ಏಷ್ಯನ್ ಹಾಕಿ ಫೆಡರೇಶನ್ 2011 ರಿಂದ ವಾರ್ಷಿಕವಾಗಿ ನಡೆಯುವ ಕಾರ್ಯಕ್ರಮವಾಗಿದೆ. ಈ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯು ಇದು ರೌಂಡ್ ರಾಬಿನ್ ಮಾದರಿಯಲ್ಲಿ ಸ್ಪರ್ಧಿಸುವ ಏಷ್ಯಾದ ಅಗ್ರ ಆರು ಫೀಲ್ಡ್ ಹಾಕಿ ತಂಡಗಳನ್ನು ಒಳಗೊಂಡಿರುತ್ತದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರು ಬಾರಿ ಪುರುಷರ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಂತ ಯಶಸ್ವಿ ತಂಡಗಳಾಗಿ ಹೊರಹೊಮ್ಮಿವೆ. * 2018 ರ ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಜಂಟಿ ವಿಜೇತರು ಎಂದು ಘೋಷಣೆ ಮಾಡಲಾಯಿತು, ಈ ಕಾರಣದಿಂದಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪುರುಷರ ಟ್ರೋಫಿಯ ಜಂಟಿ ಹಾಲಿ ಚಾಂಪಿಯನ್‌ಗಳಾಗಿವೆ.