Job Description: * ಪ್ರಸ್ತುತ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಅಭಿವೃದ್ಧಿಪಡಿಸಿರುವ ಸ್ವದೇಶಿ ನಿರ್ಮಿತ ನೆಲದಿಂದ ನೆಲಕ್ಕೆ ಚಿಮ್ಮುವ ಪ್ರಳಯ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪ್ರಸ್ತುತ DRDO ಅಭಿವೃದ್ಧಿಪಡಿಸಿರುವ ಈ ಘನ-ಇಂಧನ, ಯುದ್ಧಭೂಮಿ ಕ್ಷಿಪಣಿಯು ಭಾರತೀಯ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದ ಪೃಥ್ವಿ ಡಿಫೆನ್ಸ್ ವೆಹಿಕಲ್ ನ್ನು ಆಧರಿಸಿದೆ. * ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ಕರಾವಳಿ ದ್ವೀಪದಲ್ಲಿರುವ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪ ಪ್ರದೇಶದಿಂದ ನಡೆಸಲಾಗಿದೆ, ಹಾಗೂ ಇದು 500 ರಿಂದ 1000 ಕೆ.ಜಿ. ತೂಕದ ಸಿಡಿತಲೆ ಹೊತ್ತು ಸಾಗುವ ಸಾಮರ್ಥ್ಯವನ್ನು ಹೊಂದಿದೆ, ಅಷ್ಟೇ ಅಲ್ಲದೇ, 350 ರಿಂದ 500 ಕಿ.ಮೀ. ವರೆಗಿನ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ ಎಂದು DRDO ತಿಳಿಸಿದೆ. * ಇತ್ತೀಚಿನ LAC ನಲ್ಲಿ ನಡೆಯುತ್ತಿರುವ ಚೀನಾ ದೇಶದ ಬಿಕ್ಕಟ್ಟಿನ ನಡುವೆಯು, DRDO ಅಗ್ನಿ-5 ಸೇರಿ ಕ್ರೂಸ್ ಕ್ಷಿಪಣಿಗಳಿಗೆ ಹಲವಾರು ಹೆವಿ-ಡ್ಯೂಟಿ ಬ್ಯಾಲಿಸ್ಟಿಕ್‌ಗಳ ಪರೀಕ್ಷೆಯನ್ನು ಯಶಸ್ವಿಯಾಗಿಸಿದೆ. * ಪ್ರಳಯ್ ಕ್ಷಿಪಣಿ: ಈ ಕ್ಷಿಪಣಿಯು ಯುದ್ಧಭೂಮಿಯ ಬಳಕೆಗಾಗಿ DRDO ಅಭಿವೃದ್ಧಿಪಡಿಸಿದ ಮೇಲ್ಮೈಯಿಂದ ಮೇಲ್ಮೈಗೆ ಯುದ್ಧತಂತ್ರದ ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ, ಈ ಹಿಂದೆ 2015 ರ ಮಾರ್ಚ್ ರಲ್ಲಿ ಈ ಪ್ರಳಯ್ ಕ್ಷಿಪಣಿಯ ಅಭಿವೃದ್ಧಿಪಡಿಸುವ ಯೋಜನೆಯನ್ನು 332.88 ಕೋಟಿ ರೂ. ಬಜೆಟ್‌ನೊಂದಿಗೆ ಮಂಜೂರು ಮಾಡಲಾಗಿತ್ತು.