Job Description: * ಪ್ರಸ್ತುತ ಗಣಿತಶಾಸ್ತ್ರದಲ್ಲಿ ತಮ್ಮದೇ ಆದ ಮಹತ್ವದ ಕೊಡುಗೆ ನೀಡಿರುವ ಭಾರತೀಯ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ ಡಿಸೆಂಬರ್. 22 ರಂದು ಆಚರಿಸಲಾಗುತ್ತದೆ, ಹಾಗೂ ಭಾರತದಲ್ಲಿ ಪ್ರತಿ ವರ್ಷ ಈ ದಿನವನ್ನು 'ರಾಷ್ಟ್ರೀಯ ಗಣಿತ ದಿನ' (National Mathematics Day) ಎಂದು ಆಚರಿಸಲಾಗುತ್ತದೆ. * 'ರಾಷ್ಟ್ರೀಯ ಗಣಿತ ದಿನ' (National Mathematics Day)ವನ್ನು 2012 ರ ಡಿಸೆಂಬರ್. 22 ರಿಂದ ಆಚರಿಸಲಾಗುತ್ತಿದೆ, ಈ ದಿನವನ್ನು ಆಚರಣೆ ಮಾಡಲು ಆಗಿನ ಪ್ರಧಾನಿ ಡಾ ಮನಮೋಹನ್‌ ಸಿಂಗ್ ಅವರು ಈ ರಾಮಾನುಜನ್ ಅವರ 125 ನೇ ಜನ್ಮ ಜಯಂತಿ ಆಚರಣೆ ವೇಳೆಯಲ್ಲಿ ಮದ್ರಾಸ್ ಯೂನಿವರ್ಸಿಟಿಗೆ ಭೇಟಿ ನೀಡಿದ್ದರು ಆ ಸಂಧರ್ಭದಲ್ಲಿ ಮನಮೋಹನ್ ಸಿಂಗ್ ಅವರು 'ರಾಷ್ಟ್ರೀಯ ಗಣಿತ ದಿನ' ಎಂದು ಘೋಷಣೆ ಮಾಡಿ ಆಚರಿಸಲು ಅನುಮತಿಯನ್ನು ನೀಡಿದರು. * ಈ 'ರಾಷ್ಟ್ರೀಯ ಗಣಿತ ದಿನ'ವು ನಮ್ಮೆಲರ ಜೀವನದಲ್ಲಿ ಗಣಿತದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ, ಹಾಗೂ ಸ್ವಯಂ-ಕಲಿಕೆಗೆ ಜನರಿಗೆ ಉತ್ತೇಜನ ನೀಡುತ್ತದೆ. * ಶ್ರೀನಿವಾಸ ರಾಮಾನುಜನ್: ಇವರು ತಮಿಳುನಾಡಿನ ಈರೋಡ್‌ನಲ್ಲಿ 1887 ರ ಡಿಸೆಂಬರ್‌. 22 ರಂದು ಜನಿಸಿದ್ದಾರೆ, ಶ್ರೀನಿವಾಸ ರಾಮಾನುಜನ್ ಅವರಿಗೆ ಗಣಿತ ವಿಷಯದ ಬಗ್ಗೆ ಒಲವು, ಹಾಗೂ ಗಣಿತ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಡಿಸೆಂಬರ್‌. 22 ನ್ನು 'ರಾಷ್ಟ್ರೀಯ ಗಣಿತ ದಿನ' ಎಂದು ಆಚರಣೆ ಮಾಡಲಾಗುತ್ತದೆ. * ಪ್ರಸ್ತುತ ಶ್ರೀನಿವಾಸ ರಾಮಾನುಜನ್ ಅವರು ಟ್ರಿನಿಟಿ ಕಾಲೇಜಿನಲ್ಲಿ ಫೆಲೋ ಆಗಿ ಆಯ್ಕೆಯಾದ ಮೊದಲ ಭಾರತೀಯ. ಇವರು ಎಲಿಪ್ಟಿಕ್ ಫಂಕ್ಷನ್‌ಗಳು ಮತ್ತು ಸಂಖ್ಯೆಗಳ ಸಿದ್ಧಾಂತದ ಬಗೆಗಿನ ಕಾರ್ಯಗಳಿಗಾಗಿ ಲಂಡನ್‌ ನಲ್ಲಿನ ರಾಯಲ್ ಸೊಸೈಟಿಯ ಕಿರಿಯ ಫೆಲೋ ಆಗಿ ಕಾರ್ಯ ನಿರ್ವಹಿಸಿದ್ದಾರೆ, ಇವರು 1919 ರಲ್ಲಿ ಭಾರತಕ್ಕೆ ವಾಪಸಾದರು, ಇದಾದ ಬಳಿಕ 1920 ರಲ್ಲಿ ಕ್ಷಯರೋಗದ ಕಾರಣದಿಂದಾಗಿ ಮೃತಪಟ್ಟರು.