Job Description: * ರಷ್ಯಾ ರಾಷ್ಟ್ರದಿಂದ ಎಸ್-400 ಕ್ಷಿಪಣಿ ವ್ಯವಸ್ಥೆಯ ಮೊದಲ ರೆಜಿಮೆಂಟ್ ಭಾರತವನ್ನು ತಲುಪಿದೆ, ಈ ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು 2022 ರಲ್ಲಿ, ಭಾರತ ದೇಶದ ಉತ್ತರ ಭಾಗದಲ್ಲಿ ನಿಯೋಜಿಸಲಾಗುತ್ತದೆ, ಈ ಕ್ಷಿಪಣಿ ವ್ಯವಸ್ಥೆ ನಿಯೋಜನೆಯಿಂದ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳಿಂದ ಆಗುವ ವಾಯು ದಾಳಿಯನ್ನು ತಡೆದು ನಮ್ಮ ದೇಶವನ್ನು ರಕ್ಷಿಸಕೊಳ್ಳಬಹುದಾಗಿದೆ ಎಂದಿದ್ದಾರೆ. * ಈ S-400 ರ 2 ನೇ ರೆಜಿಮೆಂಟ್ 2022 ರ ಜೂನ್ ವೇಳೆಗೆ ಭಾರತಕ್ಕೆ ಬಂದು ತಲುಪಲಿದೆ ಎಂದಿದ್ದಾರೆ, ಆ ಸಂಧರ್ಭದಲ್ಲಿ ಈ ಕ್ಷಿಪಣಿ ವ್ಯವಸ್ಥೆಯನ್ನು ಲಡಾಖ್ ಹಾಗೂ ಅರುಣಾಚಲ ಪ್ರದೇಶದ ಭದ್ರತೆಗಾಗಿ ನಿಯೋಜಿಸುವ ಸಾಧ್ಯತೆಗಳಿವೆ ಎಂದಿದ್ದಾರೆ. ಈ ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ವಿಶ್ವದ ಅತ್ಯುತ್ತಮ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಬಳಸಲಾಗುತ್ತದೆ, ಈ ಕ್ಷಿಪಣಿಗಳು, ಯುದ್ಧ ವಿಮಾನಗಳು, ರಾಕೆಟ್‌ಗಳು ಮತ್ತು ಡ್ರೋನ್ ದಾಳಿಯ ವಿರುದ್ಧ ಹೊರಡುವ ಸಾಮರ್ಥ್ಯವನ್ನು ಹೊಂದಿವೆ, ಪ್ರತಿ ರೆಜಿಮೆಂಟ್ 8 ಲಾಂಚರ್‌ಗಳನ್ನು ಒಳಗೊಂಡಿರುತ್ತವೆ, ಹಾಗೂ ಪ್ರತಿ ಲಾಂಚರ್ 4 ಕ್ಷಿಪಣಿಗಳನ್ನು ಒಳಗೊಂಡಿರುತ್ತವೆ, ಇದೀಗ ಒಂದು ರೆಜಿಮೆಂಟ್ ಒಂದು ಬಾರಿಗೆ 32 ಕ್ಷಿಪಣಿಗಳನ್ನು ಹಾರಿಸಬಹುದಾಗಿದೆ ಎಂದು ತಿಳಿಸಿದ್ದಾರೆ. * ಈ ಎಸ್-400 ಕ್ಷಿಪಣಿ ವ್ಯವಸ್ಥೆಯ ಆಕ್ರಮಣಕಾರಿಯಾಗಿದೆ, ಇದು ಕ್ಷಿಪಣಿ ಅಥವಾ ವಿಮಾನವನ್ನು 600 ಕಿಮೀ ದೂರದಿಂದ ಟ್ರ್ಯಾಕ್ ಮಾಡಿ ನಂತರ ಅದನ್ನು 2 ಕಿಮೀ ನಿಂದ ಹಿಡಿದು 400 ಕಿಮೀ ವ್ಯಾಪ್ತಿಯಲ್ಲಿದ್ದರು ನಾಶಪಡಿಸುತ್ತದೆ. ಈ ಕ್ಷಿಪಣಿ ವ್ಯವಸ್ಥೆಯು 10 ರಿಂದ 15 ನಿಮಿಷಗಳಲ್ಲಿ ದಾಳಿಗೆ ನಡೆಸಲು ಸಿದ್ದವಾಗುತ್ತದೆ ಎಂದು ತಿಳಿಸಿದ್ದಾರೆ. * S-400 ಕ್ಷಿಪಣಿ ವ್ಯವಸ್ಥೆಯನ್ನು ಹಿಂದೆ S-300 PMU-3 ಎಂದು ಕರೆಯಲಾಗುತ್ತಿತ್ತು, ಇದು ಮೊಬೈಲ್, ಮೇಲ್ಮೈಯಿಂದ -ಏರ್ ಮಿಸೈಲ್ ವ್ಯವಸ್ಥೆಯನ್ನು 1990 ರ ದಶಕದಲ್ಲಿ ರಷ್ಯಾದ ಅಲ್ಮಾಜ್ ಸೆಂಟ್ರಲ್ ಡಿಸೈನ್ ಬ್ಯೂರೋ ಸಾಗರ ಎಂಜಿನಿಯರಿಂಗ್‌ಗಾಗಿ S-300 ಕುಟುಂಬಕ್ಕೆ ಅಪ್‌ಗ್ರೇಡ್ ಆಗಿ ಅಭಿವೃದ್ಧಿಪಡಿಸಲಾಗಿದೆ. * ಈ S-400 ಕ್ಷಿಪಣಿಯು 2007 ರ ಏಪ್ರಿಲ್. 28 ರಂದು ಸೇವೆಗೆ ಸೇರ್ಪಡೆಯಾಯಿತು, ಹಾಗೂ ಆಗಸ್ಟ್. 06 ರಂದು ಯುದ್ಧ ಕರ್ತವ್ಯವನ್ನು ನಿರ್ವಹಿಸಲು ಆರಂಭಿಸಿತ್ತು.