Job Description: * ಇದೀಗ ಅಮೇರಿಕ ನ್ಯಾಯಾಲಯವು ಬೃಹತ್ ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕೋವಿಡ್-19 ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿರುವ ಅಮೇರಿಕ ಅಧ್ಯಕ್ಷ ಜೋ ಬೈಡನ್ ಅವರ ಆದೇಶವನ್ನು ಮರುಸ್ಥಾಪಿಸಿದೆ. * ಕನಿಷ್ಟ 100 ಸಿಬಂದಿಗಳಿರುವ ಉದ್ದಿಮೆಗಳಲ್ಲಿ ಕೋವಿಡ್ -19 ಲಸಿಕೆ ಕಡ್ಡಾಯಗೊಳಿಸಿರುವ ಆದೇಶವನ್ನು ಅಮೇರಿಕದ ಔದ್ಯೋಗಿಕ ಸುರಕ್ಷೆ ಮತ್ತು ಆರೋಗ್ಯ ಇಲಾಖೆಯು ಪ್ರಕಟಿಸಿದೆ, ಹಾಗೂ ಇದು ಇದೇ ಜನೇವರಿ. 4 ರಿಂದ ಜಾರಿಗೆಯಾಗಲಿದೆ, ಇದರಿಂದಾಗಿ ಅಮೇರಿಕದ ಸರಿ ಸುಮಾರು 80 ಮಿಲಿಯನ್ ಉದ್ಯೋಗಿಗಳಿಗೆ ಈ ಆದೇಶವು ಅನ್ವಯವಾಗಲಿದೆ ಎಂದಿದ್ದಾರೆ. * ಪ್ರಸ್ತುತ ಅಮೇರಿಕದ ಔದ್ಯೋಗಿಕ ಸುರಕ್ಷೆ ಮತ್ತು ಆರೋಗ್ಯ ಇಲಾಖೆಗೆ ಸಾಂಕ್ರಾಮಿಕ ರೋಗ ನಿಯಂತ್ರಣದ ಆದೇಶ ಜಾರಿಗೊಳಿಸುವ ಹಕ್ಕಿದೆ ಎಂದು ತಿಳಿಸಿದೆ, ಎಂದು ನ್ಯಾಯಾಧೀಶೆ ಜೂಲಿಯಾ ಸ್ಮಿತ್ ಗಿಬ್ಬನ್ಸ್ ಅವರು ತೀರ್ಪು ಪ್ರಕಟಿಸಿದ್ದಾರೆ. * ಅಮೇರಿಕ ಅಧ್ಯಕ್ಷ ಜೋ ಬಿಡೆನ್ 1942 ರ ನವೆಂಬರ್. 20 ರಂದು ಜನಿಸಿದ್ದಾರೆ, ಇವರೊಬ್ಬ ಅಮೇರಿಕನ್ ರಾಜಕಾರಣಿ ಹಾಗೂ ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿದ್ದಾರೆ. ಪ್ರಸ್ತುತ ಇವರು ಯುನೈಟೆಡ್ ಸ್ಟೇಟ್ಸ್‌ನ 46 ನೇ ಅಧ್ಯಕ್ಷರಾಗಿದ್ದಾರೆ. ಇವರು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅಡಿಯಲ್ಲಿ 2009 ರಿಂದ 2017 ರವರೆಗೆ 47ನೇ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಜೋ ಬಿಡೆನ್ ಅವರು ಒಟ್ಟಾರೆ '8' ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. * ಅಧ್ಯಕ್ಷ ಬಿಡೆನ್, ಹಾಗೂ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರು 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಸೋಲಿಸಿದರು. * ಜೋ ಬಿಡೆನ್ ಅವರು ಸೆಪ್ಟೆಂಬರ್ 2021 ರ ವೇಳೆಗೆ ಅಫ್ಘಾನಿಸ್ತಾನದಿಂದ ಎಲ್ಲಾ US ಪಡೆಗಳನ್ನು ಹಿಂತೆಗೆದುಕೊಳ್ಳುವುದನ್ನು ಪೂರ್ಣಗೊಳಿಸಿದರು, ಅದೇ ಸಂಧರ್ಭದಲ್ಲಿ ಆಫ್ಘಾನಿಸ್ತಾನ್ ಸರ್ಕಾರವು ಪತನವಾಯಿತು, ಆಗ ತಾಲಿಬಾನ್ ಆಫ್ಘಾನಿಸ್ತಾನ ರಾಷ್ಟ್ರವನ್ನು ವಶಪಡಿಸಿಕೊಂಡಿತು.