Job Description: * ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಗಿರೀಶ ಠಾಕೂರಲಾಲ್ ನಾನಾವತಿ ಅವರು ತಮ್ಮ 86ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದಾಗಿ ವಿಧಿವಶರಾಗಿದ್ದಾರೆ, ಇವರು 1984 ರ ಸಿಖ್ ವಿರೋಧಿ, ಹಾಗೂ 2002 ರ ಗೋಧ್ರಾ ದಂಗೆಗಳ ಬಗ್ಗೆ ವಿಶೇಷವಾದ ತನಿಖೆಯನ್ನು ನಡೆಸಿದ್ದರು. * ನ್ಯಾ.ಗಿರೀಶ ಠಾಕೂರಲಾಲ್ ನಾನಾವತಿ: ಅವರು 1958 ರ ಫೆಬ್ರುವರಿ.11 ರಂದು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು, ಮತ್ತೇ ಇವರು 1979, ಜೂನ್. 19 ರಂದು ಗುಜರಾತ ಉಚ್ಚ ನ್ಯಾಯಾಲಯದ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು, ಮತ್ತೇ 1994 ರ ಜನೇವರಿ. 31 ರಂದು ಒಡಿಸಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ, ಹಾಗೂ 1994 ರ ಸೆಪ್ಟೆಂಬರ್. 28 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಾದ ಬಳಿಕ 1995 ರ ಮಾರ್ಚ್. 6 ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಬಡ್ತಿಯನ್ನು ಹೊಂದಿದರು, ಅಂತಿಮವಾಗಿ 2000 ರ ಫೆಬ್ರುವರಿ.16 ರಂದು ಸೇವೆಯಿಂದ ನಿವೃತ್ತಿಯನ್ನು ಹೊಂದಿದರು. * 2002 ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿರುವ ನರೇಂದ್ರ ಮೋದಿಯವರು ಗೋಧ್ರಾ ದಂಗೆಗಳ ತನಿಖೆಗಾಗಿ ನಾನಾವತಿ-ಮೆಹ್ತಾ ಆಯೋಗವನ್ನು ನಿರ್ಮಿಸಿದರು. ನ್ಯಾ.ನಾನಾವತಿ ಮತ್ತು ನ್ಯಾ.ಅಕ್ಷಯ ಮೆಹ್ತಾ ಅವರು 2002 ರ ಗೋಧ್ರೋತ್ತರ ದಂಗೆಗಳ ತಮ್ಮ ಅಂತಿಮ ವರದಿಯನ್ನು 2014 ರಲ್ಲಿ ಗುಜರಾತ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರಿಗೆ ಸಲ್ಲಿಸಿದ್ದರು. * NDA ಸರ್ಕಾರವು ನಾನಾವತಿ ನೇತೃತ್ವದಲ್ಲಿ ಅಂದರೆ 1984 ರ ಸಿಖ್ ವಿರೋಧಿ ದಂಗೆಗಳ ತನಿಖೆಗಾಗಿ ಏಕ ಸದಸ್ಯ ಆಯೋಗವನ್ನು ನಿರ್ಮಿಸಿತ್ತು. * 2002 ರ ಗುಜರಾತ್ ಗಲಭೆಗಳು: 2002 ರ ಗುಜರಾತ್ ಹಿಂಸಾಚಾರ ಮತ್ತು ಗುಜರಾತ್ ಹತ್ಯಾಕಾಂಡ ಎನ್ನುತ್ತಾರೆ, ಈ ಹಿಂದೆ 2002 ರ ಫೆಬ್ರವರಿ. 27 ರಂದು ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಘಟನೆಯು ಅಯೋಧ್ಯೆಯಿಂದ ವಾಪಸಾಗುತ್ತಿರುವ 58 ಹಿಂದೂ ಯಾತ್ರಿಕರ ಸಾವಿಗೆ ಕಾರಣವಾಯಿತು, ಅಧಿಕೃತ ಅಂಕಿಅಂಶಗಳ ಪ್ರಕಾರ, ಗಲಭೆಗಳು 1,044 ಮಂದಿ ಮೃತಪಟ್ಟಿದ್ದಾರೆ, ಹಾಗೂ 223 ಮಂದಿ ಕಾಣೆಯಾಗಿದ್ದಾರೆ, ಸುಮಾರು 2,500 ಜನರು ಗಾಯಗೊಂಡರು. * ಈ ಘಟನೆಯಲ್ಲಿ ಕನ್ಸರ್ನ್ಡ್ ಸಿಟಿಜನ್ಸ್ ಟ್ರಿಬ್ಯೂನಲ್ ರಿಪೋರ್ಟ್ ವರದಿಯ ಪ್ರಕಾರ 1,926 ಮಂದಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.