Job Description: * ಚೀನಾ ದೇಶದ ಅತ್ಯಂತ ಹಿರಿಯ ವ್ಯಕ್ತಿಯಾಗಿರುವ ಅಲಿಮಿಹಾನ್ ಸೆಯಿತಿ ಅವರು ತಮ್ಮ 135 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಇವರು ಚೀನಾದ ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದಲ್ಲಿ ವಾಸವಾಗಿದ್ದರು. * ಅಲ್ಲಿನ ಸರ್ಕಾರಿ ದಾಖಲೆಯ ಪ್ರಕಾರ ಇವರು 1886 ರ ಜೂನ್. 25 ರಂದು ಜನಿಸಿದರು. ಇವರಿಗೆ 2013 ರಲ್ಲಿ ಚೀನಾ ಅಸೋಸಿಯೇಶನ್ ಆಫ್ ಜೆರೊಂಟಾಲಜಿ ಹಾಗೂ ಜೆರಿಯಾಟ್ರಿಕ್ಸ್ ನೀಡಿರುವ ವರದಿಯ ಪ್ರಕಾರ ದೇಶದ ಅತ್ಯಂತ ಹಿರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. * ಚೀನಾದ ಕೊಮುಕ್ಸೆರಿಕ್ ನ್ನು "ದೀರ್ಘಾಯುಷ್ಯ ಪಟ್ಟಣ" ಎಂದು ಕರೆಯುತ್ತಾರೆ, ಈ ಪ್ರದೇಶದಲ್ಲಿ 90 ವರ್ಷಕ್ಕಿಂತ ಮೇಲ್ಪಟ್ಟ ಅದೆಷ್ಟೋ ಹಿರಿಯ ವ್ಯಕ್ತಿಗಳು ವಾಸವಾಗಿದ್ದಾರೆ, ಅಲ್ಲಿನ ಸ್ಥಳೀಯ ಸರ್ಕಾರವು 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ವ್ಯಕ್ತಿಗಳಿಗೆ ಉಚಿತ ವಾರ್ಷಿಕ ದೈಹಿಕ ತಪಾಸಣೆಗೆ ಸಹಾಯಧನವನ್ನು ಕಲ್ಪಿಸಿದೆ.