Job Description: * ದೇಶವು ಇತ್ತೀಚಿಗೆ ಒಡಿಶಾದ ಬಾಲಾಸೋರ್‌ನ ಕರಾವಳಿಯಲ್ಲಿ ಅಗ್ನಿ-ಪಿ (Agni - P) ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ, ಇದು ಹೊಸ ತಲೆಮಾರಿನ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿದೆ. * ಈ ಅಗ್ನಿ- ಪಿ (Agni - P) ವರ್ಗದ ಕ್ಷಿಪಣಿಗಳ ಹೊಸ ಪೀಳಿಗೆಯಾಗಿದೆ, 2 ಹಂತದ ಕ್ಯಾನಿಸ್ಟರೈಸ್ಡ್ (Canisterized missile) ಕ್ಷಿಪಣಿಯಾಗಿದೆ, ಈ ಕ್ಷಿಪಣಿ ಸುಮಾರು 1,000 ಮತ್ತು 2,000 ಕಿಮೀ ವ್ಯಾಪ್ತಿಯ ಸಾಮರ್ಥ್ಯ ಹೊಂದಿದೆ. * ಈ ಕ್ಷಿಪಣಿಯ ಅಗ್ನಿ ಕ್ಷಿಪಣಿಯ 2 ನೇ ಪರೀಕ್ಷೆಯಾಗಿದೆ, ಬಾಲಸೋರ್‌ನ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಇದರ ಪರೀಕ್ಷೆಯನ್ನು ನಡೆಸಲಾಗಿದೆ, ಹಾಗೂ ಈ ಕ್ಷಿಪಣಿ ಮೊದಲ ಪರೀಕ್ಷೆಯನ್ನು ಜೂನ್ 28 ರಂದು ಯಶಸ್ವಿಯಾಗಿ ನಡೆಸಲಾಗಿತ್ತು, DRDO ಈ ಪರೀಕ್ಷೆಯನ್ನು ನಡೆಸಿದೆ, ಟೆಲಿಮೆಟ್ರಿ, ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಸ್ಟೇಷನ್‌ಗಳು ಮತ್ತು ಡೌನ್‌ರೇಂಜ್ ಹಡಗುಗಳು ಪೂರ್ವ ಕರಾವಳಿಯು ಪ್ರದೇಶಕ್ಕೂ ಕ್ಷಿಪಣಿ ಪಥ ಮತ್ತು ನಿಯತಾಂಕಗಳನ್ನು ಟ್ರ್ಯಾಕ್ ಮಾಡುತ್ತವೆ ಹಾಗೂ ಮೇಲ್ವಿಚಾರಣೆ ಮಾಡಲಿದೆ ಎಂದು DRDO ತಿಳಿಸಿದೆ. ಇದಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು DRDO ಸಂಸ್ಥೆಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. * ದೇಶವು ಡಿಸೆಂಬರ್. 07 ರಂದು ಬ್ರಹ್ಮೋಸ್ ಸೂಪರ್‌ಸಾನಿಕ್‌ ಕ್ರೂಸ್ ಕ್ಷಿಪಣಿಯ ವಾಯು ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ, ಈ ಪರೀಕ್ಷೆಯನ್ನು ರಕ್ಷಣಾ ಸಚಿವಾಲಯವು ಬ್ರಹ್ಮೋಸ್ ಅಭಿವೃದ್ಧಿಯಲ್ಲಿ ಇದೊಂದು ಪ್ರಮುಖ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ. * DRDO ನೀಡಿರುವ ಮಾಹಿತಿಯ ಪ್ರಕಾರ ಈ ಕ್ಷಿಪಣಿಯು ಡ್ಯುಯಲ್ ರಿಡಂಡೆಂಟ್ ನ್ಯಾವಿಗೇಷನ್ ಹಾಗೂ ಗೈಡೆನ್ಸ್‌ ವ್ಯವಸ್ಥೆಯನ್ನು ಒಳಗೊಂಡಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ಇದಾಗಿದೆ.