Job Description: * ಇತ್ತೀಚೆಗೆ ರಾಷ್ಟ್ರೀಯ ಕೆಡೆಟ್ ಕೋರ್(NCC) ಕೆಡೆಟ್‌ಗಳು ರಚಿಸಿರುವ 'ರಾಷ್ಟ್ರೀಯ ಏಕತಾ ಗೀತೆ'ಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬಿಡುಗಡೆಗೊಳಿಸಿದರು, ಈ ರಾಷ್ಟ್ರೀಯ ಏಕತಾ ಗೀತೆಯನ್ನು 22 ಭಾಷೆಗಳಲ್ಲಿ ರಚಿಸಲಾಗಿದೆ, ಈ ಗೀತೆಯು ಇದು ರಾಷ್ಟ್ರೀಯ ಏಕೀಕರಣದ ವಿಷಯವನ್ನು ಆಧರಿಸಿದೆ, ಇದೀಗ ಈ ಗೀತೆಯನ್ನು ವಿಜಯ್ ಶ್ರಾಂಖ್ಲಾ ಔರ್ ಸಂಸ್ಕೃತಿಯೋನ್ ಕಾ ಮಹಾಸಂಗಮ್ ಅಭಿಯಾನದ ಗ್ರ್ಯಾಂಡ್ ಫಿನಾಲೆಯಲ್ಲಿ ಆರಂಭಿಸಲಾಗಿದೆ. * ಇತ್ತೀಚಿಗೆ ಹೊಸದೆಹಲಿಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ NCC'ಯ ಮೆಗಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮವು "ಸಂಸ್ಕೃತಿಯೋಂ ಕಾ ಮಹಾ ಸಂಗಮ" ದೊಂದಿಗೆ ಕೊನೆಗೊಂಡಿತು, ಈ ಕಾರ್ಯಕ್ರಮದಲ್ಲಿ ಕೆಲ ಆಯ್ದ NCC ಕೆಡೆಟ್‌ಗಳು ಒಗ್ಗೂಡಿದ್ದವು, ಇವು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿದರು. * ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC): ಭಾರತೀಯ ಸಶಸ್ತ್ರ ಪಡೆಗಳ ಯುವ ವಿಭಾಗವಾಗಿದೆ, ಹಾಗು ಇದು ತನ್ನ ಪ್ರಧಾನ ಕಛೇರಿಯು ನವದೆಹಲಿಯಲ್ಲಿ ಹೊಂದಿದೆ. NCC ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ತ್ರಿ-ಸೇವೆಗಳ ಸಂಸ್ಥೆಯಾಗಿ ತೆರೆಯಲಾಗಿದೆ, ಹಾಗೂ ಇದು ಭಾರತೀಯ ಸೇನೆ, ವಾಯುಪಡೆ, ಹಾಗೂ ನೌಕಾಪಡೆಯನ್ನು ಒಳಗೊಂಡಿರಲಿದೆ. ಈ ಸಂಸ್ಥೆಯು ಭಾರತದ ಯುವಕರನ್ನು ಶಿಸ್ತುಬದ್ಧ ಮತ್ತು ದೇಶಭಕ್ತಿಯ ನಾಗರಿಕರನ್ನಾಗಿ ಮಾಡುವ ಕಾರ್ಯದಲ್ಲಿ ತೊಡಗಿದೆ, ಅಷ್ಟೇ ಅಲ್ಲದೇ ಇದು ಸ್ವಯಂಸೇವಾ ಸಂಸ್ಥೆಯಾಗಿದೆ, ಪ್ರೌಢಶಾಲೆ, ಹೈಯರ್ ಸೆಕೆಂಡರಿ, ವಿಶ್ವವಿದ್ಯಾನಿಲಯ, ಹಾಗೂ ಕಾಲೇಜುಗಳಿಂದ ಕೆಡೆಟ್‌ಗಳನ್ನು ನೇಮಕ ಮಾಡಿಕೊಳ್ಳುತ್ತದೆ, ಮತ್ತು ಎಲ್ಲಾ ಯುವ ಕೆಡೆಟ್‌ಗಳಿಗೆ ಸಣ್ಣ ಶಸ್ತ್ರಾಸ್ತ್ರ ಮತ್ತು ಡ್ರಿಲ್‌ನಲ್ಲಿ ಮೂಲಭೂತ ಮಿಲಿಟರಿ ತರಬೇತಿಯನ್ನು ಕಲ್ಪಿಸುತ್ತದೆ. * NCC ನ್ನು 1950 ರ ಕಾಯಿದೆ ಅಡಿಯಲ್ಲಿ ಸ್ಥಾಪಿಸಲಾಗಿದೆ, ಇದನ್ನು 'ಯೂನಿವರ್ಸಿಟಿ ಕಾರ್ಪ್ಸ್' ಎಂದು ಗುರುತಿಸಲಾಗುತ್ತದೆ, ಹಾಗೆ ಇದನ್ನು 1917 ರ ಭಾರತೀಯ ರಕ್ಷಣಾ ಕಾಯಿದೆ ಅಡಿಯಲ್ಲಿ ಸ್ಥಾಪನೆ ಮಾಡಲಾಗಿದೆ, ಈ NCC ಯನ್ನು ಸೈನ್ಯಗಳಲ್ಲಿನ ಕೊರತೆಯನ್ನು ತುಂಬುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಮತ್ತೇ ಇದನ್ನು 1920 ರಲ್ಲಿ "ಯೂನಿವರ್ಸಿಟಿ ಕಾರ್ಪ್ಸ್"ನ್ನು ಯೂನಿವರ್ಸಿಟಿ ಟ್ರೈನಿಂಗ್ ಕಾರ್ಪ್ಸ್ (UTC) ಎಂದು ಬದಲಾವಣೆ ಮಾಡಲಾಯಿತು.