Job Description: * ಪ್ರಸ್ತುತ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ (BWF) ಅಥ್ಲೀಟ್‌ಗಳ ಆಯೋಗದ ಸದಸ್ಯೆಯಾಗಿ ಭಾರತೀಯ ಪಿ.ವಿ. ಸಿಂಧು ಅವರು ನೇಮಕಗೊಂಡಿದ್ದಾರೆ, ಇವರು ಎರಡು ಬಾರಿಯ ಒಲಿಂಪಿಕ್ಸ್ ಪದಕ ಜಯಿಸಿದ್ದಾರೆ. * ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು, 2020 ನೇ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ. * ಈ BWF ಅಥ್ಲೀಟ್‌ಗಳ ಆಯೋಗಕ್ಕೆ ಮಾಜಿ ವಿಶ್ವ ಚಾಂಪಿಯನ್‌ 'ಸಿಂಧು' ಇನ್ನು '6' ಜನ ಈ ಆಯೋಗಕ್ಕೆ ನೇಮಕವಾಗಿದ್ದರೆ, ಇವರ ಅಧಿಕಾರವು 2025ರವರೆಗೆ ಇರಲಿದೆ BWF ತಿಳಿಸಿದೆ. * 2021-2025 ವರೆಗಿನ ಅಥ್ಲೀಟ್‌ಗಳ ಆಯೋಗಕ್ಕೆ: ಅಮೇರಿಕದ- ಐರಿಸ್ ವಾಂಗ್, ನೆದರ್ಲೆಂಡ್ಸ್- ರಾಬಿನ್ ಟೇಬೆಲಿಂಗ್, ಇಂಡೊನೇಷ್ಯಾದ- ಗ್ರೇಸಿಯಾ ಪೋಲಿ, ಕೊರಿಯಾದ- ಕಿಮ್ ಸೊಯೊಂಗ್, ಚೀನಾದ- ಜೆಂಗ್‌ ಸಿ ವೇ, ಹಾಗೂ ಭಾರತೀಯ 'ಪಿ.ವಿ. ಸಿಂಧು'ರನ್ನು ನೇಮಕ ಮಾಡಿ BWF ಆದೇಶ ಹೊರಡಿಸಿದೆ, ಇದೀಗ ನೇಮಕ ಗೊಂಡಿರುವ ಆರು ಸದಸ್ಯರಲ್ಲಿ ಶೀಘ್ರವೇ ಒಬ್ಬರನ್ನು ಅಧ್ಯಕ್ಷ, ಹಾಗೂ ಮತ್ತೊಬ್ಬರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗುತ್ತದೆ ಎಂದು BWF ಹೇಳಿಕೆ ನೀಡಿದೆ. * ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF): ಇದು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ (IOC) ಗುರುತಿಸಲಾಗಿರುವ ಬ್ಯಾಡ್ಮಿಂಟನ್ ಕ್ರೀಡೆಯ ಅಂತರಾಷ್ಟ್ರೀಯ ಆಡಳಿತ ಮಂಡಳಿಯಾಗಿದೆ. * ಈ ಹಿಂದೆ 1934 ರಲ್ಲಿ (ಕೆನಡಾ, ಡೆನ್ಮಾರ್ಕ್, ಇಂಗ್ಲೆಂಡ್, ಫ್ರಾನ್ಸ್, ಐರ್ಲೆಂಡ್, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಸ್ಕಾಟ್ಲೆಂಡ್ ಮತ್ತು ವೇಲ್ಸ್) ಈ ಎಲ್ಲ '9' ಸದಸ್ಯ ರಾಷ್ಟ್ರಗಳು ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಫೆಡರೇಶನ್ (IBF) ಆಗಿ ಸ್ಥಾಪಿಸಿದವು. ಮತ್ತೇ ಇದು 1981 ರಲ್ಲಿ IBF ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್‌ನೊಂದಿಗೆ ವಿಲೀನಗೊಂಡಿತು, ಹಾಗೂ 2006 ರ ಸೆಪ್ಟೆಂಬರ್. 24 ರಂದು ಮ್ಯಾಡ್ರಿಡ್‌ನಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸಂಸ್ಥೆಯ ಹೆಸರನ್ನು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ಎಂದು ಬದಲಾವಣೆ ಮಾಡಲಾಯಿತು. * BWF ಅನ್ನು ಸ್ಥಾಪಿಸಿದಾಗ (IBF ಆಗಿ), ಆ ಸಂಧರ್ಭದಲ್ಲಿ ಇದರ ಮುಖ್ಯ ಕಛೇರಿ UK ಯ ಚೆಲ್ಟೆನ್‌ಹ್ಯಾಮ್‌ ಎಂಬಲ್ಲಿತ್ತು, ಹಾಗೂ 2005 ರ ಅಕ್ಟೋಬರ್. 01 ರಂದು ಇದರ ಪ್ರಧಾನ ಕಛೇರಿಯನ್ನು ಮಲೇಷ್ಯಾದ ಕೌಲಾಲಂಪುರ್'ಕ್ಕೆ ಸ್ಥಳಾಂತರಿಸಲಾಯಿತು. ಪೌಲ್-ಎರಿಕ್ ಹೋಯರ್ ಲಾರ್ಸೆನ್ ಅವರು ಈ ಸಂಸ್ಥೆಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ, ಇದೀಗ BWF ವಿಶ್ವದಾದ್ಯಂತ 176 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.