Job Description: * ಪ್ರಸ್ತುತ ಕೇಂದ್ರದಲ್ಲಿನ ನರೇಂದ್ರ ಮೋದಿ ಅವರ ಸರ್ಕಾರವು ಇದೇ ಡಿಸೆಂಬರ್. 20 ರಿಂದ ದೇಶಾದ್ಯಂತ 'ಉತ್ತಮ ಆಡಳಿತ ಸಪ್ತಾಹ' ಅಭಿಯಾನವನ್ನು ಆರಂಭಿಸಿದೆ, ಈ ಅಭಿಯಾನವು ಭಾರತದ ಹಳ್ಳಿಗಳಲ್ಲಿನ ಕುಂದು ಕೊರತೆಗಳಿಗೆ ಪರಿಹಾರವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಮೋದಿ ಅವರು ತಿಳಿಸಿದ್ದಾರೆ. * ಈ ಅಭಿಯಾನವನ್ನು ಉತ್ತಮ ಆಡಳಿತ, ಹಾಗು ನಾಗರಿಕರಿಗೆ ಮೊದಲ ಸ್ಥಾನ ನೀಡುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ ಎಂದು ಮೋದಿ ಅವರು ತಿಳಿಸಿದ್ದಾರೆ. ಈ ಅಭಿಯಾನದಲ್ಲಿ ಸಚಿವಾಲಯದ ಸಿಬ್ಬಂದಿಗಳು, ಹಾಗೂ ಸಾರ್ವಜನಿಕರ ಕುಂದುಕೊರತೆಗಳಿಗೆ ಪರಿಹಾರ, ಹಾಗೂ ಪಿಂಚಣಿಯ ಸರಿಯಾದ ವಿತರಣೆಯನ್ನು ಪರಿಶೀಲಿಸಲು, ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಪರಿಹಾರ ಮತ್ತು ವಿಲೇವಾರಿ, ಹಾಗೂ ಗ್ರಾಮ ಮಟ್ಟದವರೆಗೆ ಸೇವಾ ವಿತರಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಇದೇ ಡಿಸೆಂಬರ್. 20 ರಿಂದ ಡಿಸೆಂಬರ್. 25 ರವರೆಗೆ 'ಉತ್ತಮ ಆಡಳಿತ ವಾರ'ವನ್ನು ಆಚರಣೆ ಮಾಡಲಾಗುತ್ತಿದೆ. * ಈ 'ಉತ್ತಮ ಆಡಳಿತ ಸಪ್ತಾಹ' ಅಭಿಯಾನವು DARPG ಸಿಬ್ಬಂದಿ ಹಾಗೂ ತರಬೇತಿ ಇಲಾಖೆ, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ, ವ್ಯವಹಾರಗಳು ಮತ್ತು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ, ವಿದೇಶಾಂಗ ಸಚಿವಾಲಯದ ಸಹಾಯಗಳೊಂದಿಗೆ ಡಿಸೆಂಬರ್. 20 ರಿಂದ ಡಿಸೆಂಬರ್. 25 ರವರೆಗೆ ಕಾರ್ಯಕ್ರಮಗಳನ್ನು ನಿಯೋಜಿಸಲಾಗಿದೆ. * ಪ್ರಸ್ತುತ 'ಗುಡ್ ಗವರ್ನೆನ್ಸ್' ವತಿಯಿಂದ ಇದೇ ಡಿಸೆಂಬರ್. 25ರಂದು ಇಂಡೆಕ್ಸ್ ಬಿಡುಗಡೆಯಾಗಲಿದೆ, ಇದೀಗ ಕೇಂದ್ರ ಸರ್ಕಾರವು '6' ದಿನಗಳ ಪ್ರಚಾರಕ್ಕಾಗಿ ಹರಿಯಾಣ, ಒಡಿಶಾ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳು ಅಭಿಯಾನದ ಜೊತೆ ಮುಖ್ಯವಾಗಿ ಕಾಣಿಸಿಕೊಳ್ಳಲಿದೆ. ಇದೇ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರವು ಕೇಂದ್ರ ಮಟ್ಟದಲ್ಲಿನ 3 ಲಕ್ಷಕ್ಕೂ ಅಧಿಕ ನಾಗರಿಕರ ಕುಂದುಕೊರತೆಗಳನ್ನು ತೆರವುಗೊಳಿಸಲು ಅಭಿಯಾನವನ್ನು ಕೈಗೊಂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಡಿಸೆಂಬರ್ 25 ರಂದು 'ಉತ್ತಮ ಆಡಳಿತ ಸೂಚ್ಯಂಕ' ಬಿಡುಗಡೆಯಾಗಲಿದೆ, ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ತಿಳಿಸಿದ್ದಾರೆ, ಹಾಗೂ 75ನೇ 'ಆಜಾದಿ ಕಾ ಅಮೃತ್ ಮಹೋತ್ಸವ' ಅಂಗವಾಗಿ 'ಉತ್ತಮ ಆಡಳಿತ ಸಪ್ತಾಹ'ವನ್ನು ಆಚರಿಸಲಾಗುತ್ತಿದೆ. ಈ ಅಭಿಯಾನದಲ್ಲಿ ಸರಿ ಸುಮಾರು 700ಕ್ಕೂ ಅಧಿಕ ಜಿಲ್ಲಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಹಾಗೂ ಇದನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಡಿಸೆಂಬರ್. 25ರಂದು 'ಉತ್ತಮ ಆಡಳಿತ ದಿನ' ಎಂದು ಆಚರಿಸಲಾಗುತ್ತದೆ ಎಂದಿದ್ದಾರೆ.