Job Description: * ಇದೀಗ ಪ್ರಪಂಚದಾಧ್ಯಂತ ಕೊರೋನಾ ರೂಪಾಂತರಿ ಓಮಿಕ್ರಾನ್ ವೈರಸ್ (Omicron Variant ) ಹರಡುತ್ತಿದೆ, ಈ ಹಿನ್ನೆಲಯಿಂದಾಗಿ ಜನೇವರಿಯಲ್ಲಿ ನಡೆಯಬೇಕಾಗಿರುವ ದಾವೋಸ್ ಶೃಂಗಸಭೆ (Davos Summit)ಯನ್ನು ಸುರಕ್ಷತಾ ದೃಷ್ಟಿಯಿಂದ ಮುಂದೂಡಲಾಗಿದೆ ಎಂದು ರಾಯಿಟರ್ ವರದಿ ಮಾಡಿದೆ. * ಇದೀಗ ವಿಶ್ವ ಆರ್ಥಿಕ ವೇದಿಕೆ (World Economic Forum(WEF)) ಜನೇವರಿಯಲ್ಲಿ ದಾವೋಸ್'ನಲ್ಲಿ ತನ್ನ ವಾರ್ಷಿಕ ಸಭೆಯನ್ನು ನಡೆಸುತಿತ್ತು, ಆದರೆ ಕೋವಿಡ್-19 ರೂಪಾಂತರ ಒಮೈಕ್ರಾನ್ ವೈರಸ್ ಹರಡುವ ಭೀತಿಯಿಂದಾಗಿ ಈ ದಾವೋಸ್ ಶೃಂಗಸಭೆಯನ್ನು 2022ರ ಮಧ್ಯಭಾಗದವರೆಗೆ ಮುಂದೂಡಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ. * ಪ್ರಸ್ತುತ 2022ರವರೆಗೆ ದಾವೋಸ್ ಶೃಂಗಸಭೆಯನ್ನು ಸ್ವಿಟ್ಜರ್ಲೆಂಡ್‌ನ ದಾವೋಸ್'ನ ಕ್ಲೋಸ್ಟರ್ಸ್'ನಲ್ಲಿ ಇದೇ 2022 ರ ಜನೇವರಿ. 17 ರಿಂದ ಜನವರಿ 22 ರವರೆಗೆ ವಿಶ್ವ ಆರ್ಥಿಕ ವೇದಿಕೆ (WEF) ನಿಯೋಜಿಸಿತ್ತು, ಆದರೆ ಇದೀಗ ಈ ವಾರ್ಷಿಕ ಸಭೆಯನ್ನು ಓಮಿಕ್ರಾನ್ ವೈರಸ್ ಹರಡುವ ಭೀತಿಯಿಂದ ಮುಂದೂಡಲಾಗಿದೆ. * ವರ್ಲ್ಡ್ ಎಕನಾಮಿಕ್ ಫೋರಮ್ (WEF): ಸ್ವಿಟ್ಜರ್ಲೆಂಡ್‌ನ ಜಿನೀವಾ ಕ್ಯಾಂಟನ್‌ನ ಕಾಲೋನಿಯಲ್ಲಿ ನೆಲೆಗೊಂಡಿರುವ ಅಂತರರಾಷ್ಟ್ರೀಯ ಸರ್ಕಾರೇತರ ಮತ್ತು ಲಾಬಿ ಮಾಡುವ ಸಂಸ್ಥೆಯಾಗಿದೆ, ಈ ಸಂಸ್ಥೆಯನ್ನು 1971 ರ ಜನೇವರಿ. 24 ರಂದು ಕ್ಲಾಸ್ ಶ್ವಾಬ್ ಅವರು ಸ್ಥಾಪಿಸಿದ್ದಾರೆ. ಇದು ತನ್ನ ಫೌಂಡೇಶನ್'ನ 1,000 ಸದಸ್ಯ ಕಂಪನಿಗಳಿಂದ ಹಣವನ್ನು ಪಡೆಯುತ್ತದೆ, ಹಾಗೂ ಇದು '5' ಶತಕೋಟಿ US ಡಾಲರ್‌ಗಿಂತಲೂ ಅಧಿಕ ವಹಿವಾಟು ಹೊಂದಿದೆ. * WEF ಹೆಚ್ಚಾಗಿ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ಜನೇವರಿ ತಿಂಗಳಿನ ಅಂತ್ಯದಲ್ಲಿ ವಾರ್ಷಿಕ ಸಭೆಗೆ ಹೆಸರುವಾಸಿಯಾಗಿದೆ. ಈ ಸಭೆಯು ಹೂಡಿಕೆದಾರರು, ವ್ಯಾಪಾರ ಮುಖಂಡರು, ರಾಜಕೀಯ ಮುಖಂಡರು, ಅರ್ಥಶಾಸ್ತ್ರಜ್ಞರು, ಪ್ರಸಿದ್ಧ ವ್ಯಕ್ತಿಗಳು ಮತ್ತು ಪತ್ರಕರ್ತರನ್ನು ಸೇರಿಸಿ 500 ಸೆಷನ್‌ಗಳಲ್ಲಿ ಜಾಗತಿಕ ಸಮಸ್ಯೆಗಳನ್ನು '5' ದಿನಗಳವರೆಗೆ ಚರ್ಚಿಸಲು ಅವಕಾಶ ನೀಡುತ್ತದೆ.