Job Description: * ಪ್ರಸ್ತುತ RECMA 2021 ರ ಹೊಸ ವ್ಯವಹಾರ ಬ್ಯಾಲೆನ್ಸ್ ವರದಿಯಲ್ಲಿ ಪಬ್ಲಿಸಿಸ್ ಗ್ರೂಪ್ ಇಂಡಿಯಾದ ಭಾಗದ ಸ್ಟಾರ್‌ಕಾಂ(Starcom) ಇಂಡಿಯಾ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ. * RECMA ಇದೊಂದು ಜಾಗತಿಕ ಸ್ವತಂತ್ರ ಸಂಶೋಧನಾ ಸಂಸ್ಥೆಯಾಗಿದೆ, ಇದೀಗ ಇದು ವಿಶ್ವಾದ್ಯಂತ ಮಾಧ್ಯಮ ಏಜೆನ್ಸಿಗಳ ಡೇಟಾವನ್ನು ಮೌಲ್ಯಮಾಪನ ಮಾಡುವ ಸಂಸ್ಥೆಯಾಗಿದೆ, ಈ ಸಂಸ್ಥೆಯು ಕ್ರಾಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್‌, ನ್ಯೂ-ಏಜ್, ಆಪ್ ಎಕಾನಮಿಯು ಆಟೋ, ಡಿಟುಸಿ, ಫಿನ್‌ಟೆಕ್‌, ಇ-ಕಾಮರ್ಸ್, ಗೇಮಿಂಗ್, ಹೀಗೆ ಇನ್ನಿತರ ಡೇಟಾಗಳನ್ನು ಹೊಂದಿರಲಿದೆ. * ಹ್ಯೂಮನ್ ಎಕ್ಸ್‌ಪೀರಿಯನ್ಸ್ ಏಜೆನ್ಸಿಯು(Human Experience Agency) ಸ್ಟಾರ್‌ಕಾಂ(Starcom)ನ ಡಾಬರ್, ಫಾರ್ಮಸಿ, ಸ್ಟೆಲ್ಲಂಡೀಸ್, ವೀಸಾ, ಆಕ್ಸಿಸ್‌ಬ್ಯಾಂಕ್,ಸಿಟಿಬ್ಯಾಂಕ್,ನೈಕಾ, ಮತ್ತು ಫ್ರೆಶ್‌ಟುಹೋಂ ಇನ್ನಿತರ ಡೇಟಾವನ್ನು ಸಂಗ್ರಹಿಸುತ್ತದೆ * ರತಿ ಗಂಗಪ್ಪ ಅವರು ಪ್ರಸ್ತುತ ಸ್ಟಾರ್‌ಕಾಮ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ, ಇವರು 'ಪ್ರತಿಷ್ಠಿತ RECMA ವರದಿ 2021 ರಲ್ಲಿ ಸ್ಟಾರ್‌ಕಾಂ ಹೊಸ ವ್ಯಾಪಾರದ ನಂ. 1 ಮಾಧ್ಯಮ ಏಜೆನ್ಸಿ ಎಂದು ಗುರುತಿಸಿಕೊಂಡಿದೆ ಎಂದು ತಿಳಿಸಿದ್ದಾರೆ. * ಪ್ರತಿಷ್ಠಿತ RECMA ಈ ಹಿಂದೆ 1991 ರ ಜೂನ್'ನಲ್ಲಿ ಪ್ಯಾರಿಸ್‌ನಲ್ಲಿ ಸ್ಥಾಪನೆಯಾಗಿದೆ, ಈ RECMA ಜಾಗತಿಕ ಮಟ್ಟದಲ್ಲಿ ವ್ಯಾಪಕ ಶ್ರೇಣಿಯ ಮಾಧ್ಯಮ ಸಂಸ್ಥೆ ಸಂಕೇತ ವರದಿಗಳನ್ನು ಪ್ರಕಟಿಸುವ ಏಕೈಕ ಸ್ವತಂತ್ರ ಕಂಪನಿಯಾಗಿದೆ, ಇದೀಗ ಇದು ಸರಿ ಸುಮಾರು 90 ದೇಶಗಳಲ್ಲಿ 1,400 ಕ್ಕೂ ಅಧಿಕ ಮಾಧ್ಯಮ ಏಜೆನ್ಸಿಗಳಿಂದ ಡೇಟಾವನ್ನು ಸಂಗ್ರಹಿಸುತ್ತದೆ, ಹಾಗೂ ಅದನ್ನು ವಿಶ್ಲೇಷಣೆ ಮಾಡುತ್ತದೆ, ಹಾಗೂ ಇದು 500 ಜಾಗತಿಕ ಜಾಹೀರಾತುದಾರರಿಗೆ ತಮ್ಮ ನಿರ್ಧಾರ ತಗೆದುಕೊಳ್ಳುವಲ್ಲಿ, ಹಾಗೂ ಏಜೆನ್ಸಿ ಸೋರ್ಸಿಂಗ್‌ನಲ್ಲಿ ಸಹಾಯ ಮಾಡುವ ಕಾರ್ಯತಂತ್ರದ ಗುಪ್ತಚರ ಉಲ್ಲೇಖ ಸಾಧನಗಳನ್ನು ಒದಗಿಸಲು ಸಹಾಯ ಮಾಡುತ್ತದೆ.