Job Description: * ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ರಾಜ್ಯ ಸರ್ಕಾರವು ಒಂದು ವಿನೂತನ ಯೋಜನೆಯನ್ನು ಘೋಷಿಸಿದೆ, ಅದುವೇ ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಪ್ರಾಣ ರಕ್ಷಿಸುವ ನಿಟ್ಟಿನಲ್ಲಿ 'ಇನ್ನುಯಿರ್‌ ಕಾಪ್ಪನ್‌' ಎಂಬ ಹೆಸರಿನ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. * ಈ ಯೋಜನೆ ಅಡಿಯಲ್ಲಿ ಅಪಘಾತಗಳಲ್ಲಿ ಗಾಯಗೊಂಡವರಿಗೆ ಹೆದ್ದಾರಿಗಳಲ್ಲಿ ಅಥವಾ ಸಮೀಪವಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 48 ಗಂಟೆಗಳ ಕಾಲ ಉಚಿತ ತುರ್ತು ಚಿಕಿತ್ಸೆ ನೀಡಲಾಗುತ್ತದೆ, ಹಾಗೂ ಸುಮಾರು 81 ಜೀವ ರಕ್ಷಕ ಪ್ರಕ್ರಿಯೆಗಳನ್ನು ಪರಿಗಯಿಸಲಾಗುತ್ತದೆ, ಅಷ್ಟೇ ಅಲ್ಲದೆ ಗರಿಷ್ಠ 1 ಲಕ್ಷ ರೂ.ಗಳವರೆಗಿನ ಮೊತ್ತದ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಅಪಘಾತಗಳಲ್ಲಿ ಗಾಯಗೊಂಡಿರುವವರು 48 ಗಂಟೆಗಳ ಕಾಲ ಉಚಿತ ತುರ್ತು ಚಿಕಿತ್ಸೆಯನ್ನು ಪಡೆಯಬಹುದು ಇದಾದ ಬಳಿಕ ಅವರು ಅದೇ ಆಸ್ಪತ್ರೆಗಳಲ್ಲಿ ಇರಲು ಇಚ್ಛಿಸಿದರೆ ನಂತರದ ಚಿಕಿತ್ಸೆಗೆ ಹಣ ನೀಡಬೇಕಾಗುತ್ತದೆ ಎಂದು ತಮಿಳನಾಡು ಸರ್ಕಾರ ತಿಳಿಸಿದೆ.