Job Description: * ಪ್ರಸ್ತುತ ದೇಶದಲ್ಲಿ 62 ಲಕ್ಷದಷ್ಟು ಕೋವಿಡ್ ಲಸಿಕೆಗಳು ವ್ಯರ್ಥವಾಗಿವೆ, ಈ ಕೋವಿಡ್ ಲಸಿಕೆಗಳು ವ್ಯರ್ಥವಾಗಿರುವದರಲ್ಲಿ ಅರ್ಧದಷ್ಟು ಪಾಲನ್ನು ಉತ್ತರ ಪ್ರದೇಶ, ರಾಜಸ್ಥಾನ, ಹಾಗೂ ಮಧ್ಯ ಪ್ರದೇಶ ರಾಜ್ಯಗಳೇ ಹೊಂದಿವೆ. * ಈ ಕೋವಿಡ್ ಲಸಿಕೆಗಳು ವ್ಯರ್ಥವಾಗಿರುವ ಪಟ್ಟಿಯಲ್ಲಿ: ಮಧ್ಯ ಪ್ರದೇಶ ರಾಜ್ಯವು 16.48 ಲಕ್ಷ ಲಸಿಕೆಗಳನ್ನು ಹಾಳುಮಾಡಿ ಅಗ್ರಸ್ಥಾನದಲ್ಲಿದೆ, ಉತ್ತರ ಪ್ರದೇಶ ರಾಜ್ಯವು 12.6 ಲಕ್ಷ ಲಸಿಕೆಗಳನ್ನು, ಹಾಗೂ ರಾಜಸ್ಥಾನವು 6.86 ಲಕ್ಷ ಲಸಿಕೆಗಳನ್ನು ಹಾಳುಮಾಡಿ ನಂತರದ ಸ್ಥಾನಗಳಲ್ಲಿವೆ, ಈ ಮೂರೂ ರಾಜ್ಯಗಳು 36 ಲಕ್ಷದಷ್ಟು ಲಸಿಕೆಗಳನ್ನು ವ್ಯರ್ಥಮಾಡಿವೆ. * ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್‌ ಅವರು ನೀಡಿರುವ ಮಾಹಿತಿಯ ಪ್ರಕಾರ ದೇಶದ ರಾಜ್ಯಗಳು, ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ 11 ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆಗಳು ವ್ಯರ್ಥವಾಗಿವೆ ಎಂದು ಲೋಕಸಭೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ. * ಕರ್ನಾಟಕದಲ್ಲಿ 1.27 ಲಕ್ಷ ಲಸಿಕೆಗಳು, ಮತ್ತು ತಮಿಳುನಾಡು 2.38 ಲಕ್ಷ ಲಸಿಕೆಗಳು, ಆಂಧ್ರ ಪ್ರದೇಶ 3.80 ಲಕ್ಷ ಲಸಿಕೆಗಳು, ಗುಜರಾತ್‌ ರಾಜ್ಯದಲ್ಲಿ 2.28 ಲಕ್ಷ ಲಸಿಕೆಗಳು, ಅಸ್ಸಾಂ 4.58 ಲಕ್ಷ ಲಸಿಕೆಗಳು, ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 4.57 ಲಕ್ಷ ಲಸಿಕೆಗಳು ಹಾಳಾಗಿವೆ. * ಇದೀಗ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಗಳನ್ನು ಉಚಿತವಾಗಿ ಪೂರೈಕೆ ಮಾಡುವದರಿಂದ ಕೇಂದ್ರದ ಸರ್ಕಾರಕ್ಕೆ 19,675.46 ಕೋಟಿ ರೂ. ಹೊರೆ ಬಿದ್ದಿದೆ ಎಂದು ಸಚಿವರು ಲೋಕಸಭೆಗೆ ತಿಳಿಸಿದ್ದಾರೆ.