Job Description: * ಪ್ರಸ್ತುತ ಕ್ಯಾಲಿಫೋರ್ನಿಯಾದ ಸ್ಪೇಸ್‌ ಎಕ್ಸ್‌(Space X) ಇಲ್ಲಿರುವಂತಹ ವಂಡೆನ್‌ಬರ್ಗ್‌ ಬಾಹ್ಯಾಕಾಶ ನೌಕಾ ನೆಲೆಯಿಂದ 52 ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಉಪಗ್ರಹಗಳನ್ನು ಹೊತ್ತಿರುವ ರಾಕೆಟ್ ನ ಉಡಾವಣೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. * ಈ ಇಂಟರ್‌ನೆಟ್‌ ಉಪಗ್ರಹಗಳನ್ನು ಹೊತ್ತಿರುವ ರಾಕೆಟ್'ನ್ನು ಎರಡು ಹಂತದಲ್ಲಿ ಫಾಲ್ಕನ್‌ 9 ರಾಕೆಟ್‌ ಬಳಸಿ ಉಡಾವಣೆಯನ್ನು ನಡೆಸಲಾಗಿದೆ, ಈ ರಾಕೆಟ್ 2 ನೇ ಹಂತದಲ್ಲಿ ಯಶಸ್ವಿಯಾಗಿ ಗುರಿ ತಲುಪಿ ಕಕ್ಷೆಗೆ ಉಪಗ್ರಹಗಳನ್ನು ಸೇರಿಸಿದೆ ಎಂದು ಉಡಾವಣಾ ವೀಕ್ಷಣೆಗಾರರಾಗಿರುವ ಯೊಮೆ ಝೋ ಅವರು ಹೇಳಿಕೆ ನೀಡಿದ್ದಾರೆ. * ಸ್ಟಾರ್‌ಲಿಂಕ್‌ ಎಂಬುದು ಉಪಗ್ರಹ ಆಧರಿತ ಜಾಗತಿಕ ಇಂಟರ್‌ನೆಟ್‌ ವ್ಯವಸ್ಥೆಯಾಗಿದೆ, ಹಾಗೂ ಇದನ್ನು ಸ್ಟೇಸ್ ಎಕ್ಸ್‌ ದಶಕಗಳಿಂದ ನಿರ್ವಹಣೆ ಮಾಡುತ್ತಿದೆ. * ಸ್ಪೇಸ್‌ಎಕ್ಸ್(SpaceX): ಸ್ಪೇಸ್ ಎಕ್ಸ್‌ಪ್ಲೋರೇಶನ್ ಟೆಕ್ನಾಲಜೀಸ್ ಕಾರ್ಪೊರೇಷನ್, ಅಮೇರಿಕದ ಏರೋಸ್ಪೇಸ್ ತಯಾರಕ ಬಾಹ್ಯಾಕಾಶ ಸಾರಿಗೆ ಸೇವೆಗಳು ಮತ್ತು ಸಂವಹನ ನಿಗಮವಾಗಿದೆ, ಇದು ತನ್ನ ಪ್ರಧಾನ ಕಛೇರಿಯನ್ನು ಕ್ಯಾಲಿಫೋರ್ನಿಯಾದ ಹಾಥಾರ್ನ್‌ನಲ್ಲಿ ಹೊಂದಿದೆ. ಈ SpaceX 'ನ್ನು 2002 ರಲ್ಲಿ ಎಲೋನ್ ಮಸ್ಕ್ ಅವರು ಮಂಗಳ ಗ್ರಹದ ವಸಾಹತೀಕರಣವನ್ನು ಸಕ್ರಿಯಗೊಳಿಸಲು ಬಾಹ್ಯಾಕಾಶ ಸಾರಿಗೆ ವೆಚ್ಚವನ್ನು ಕಡಿಮೆಮಾಡಲು ಸ್ಥಾಪಿಸಿದ್ದಾರೆ. ಸ್ಪೇಸ್‌ಎಕ್ಸ್ ಫಾಲ್ಕನ್ 9 ಮತ್ತು ಫಾಲ್ಕನ್ ಹೆವಿ ಉಡಾವಣಾ ವಾಹನಗಳು, ಹಲವಾರು ರಾಕೆಟ್ ಎಂಜಿನ್‌ಗಳು, ಡ್ರ್ಯಾಗನ್ ಕಾರ್ಗೋ, ಸಿಬ್ಬಂದಿ ಬಾಹ್ಯಾಕಾಶ ನೌಕೆ ಹಾಗೂ ಸ್ಟಾರ್‌ಲಿಂಕ್ ಸಂವಹನ ಉಪಗ್ರಹಗಳನ್ನು ಅಭಿವೃದಿಪಡಿಸುತ್ತದೆ. * ಸ್ಪೇಸ್‌ಎಕ್ಸ್(SpaceX) ಫಾಲ್ಕನ್ 9 ಸರಣಿಯ ರಾಕೆಟ್‌ಗಳನ್ನು ನೂರಕ್ಕೂ ಹೆಚ್ಚು ಬಾರಿ ಉಡಾವಣೆ ಮಾಡಿದೆ. ಈ ಸ್ಪೇಸ್‌ಎಕ್ಸ್(SpaceX) ವಾಣಿಜ್ಯ ಅಂತರ್ಜಾಲ ಸೇವೆಯನ್ನು ಒದಗಿಸಲು ಸ್ಟಾರ್‌ಲಿಂಕ್ ಹೆಸರಿನ ಉಪಗ್ರಹ ಮೆಗಾ ಸಮೂಹವನ್ನು ಅಭಿವೃದ್ಧಿಪಡಿಸುತ್ತಿದೆ, ಜನೇವರಿ 2020 ರಲ್ಲಿ ಸ್ಟಾರ್‌ಲಿಂಕ್ ಸಮೂಹವು ಉಡಾವಣೆಯಾದ ಅತಿದೊಡ್ಡ ಉಪಗ್ರಹ ನಕ್ಷತ್ರಪುಂಜವಾಗಿದೆ.