Job Description: * ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಗೋವಾ ವಿಮೋಚನಾ ದಿನದ ಅಂಗವಾಗಿ ಅಗೋಡಾ ಜೈಲು ವಸ್ತು ಸಂಗ್ರಹಾಲಯದ ನವೀಕರಣಕ್ಕೆ ಸಂಬಂಧಿಸಿದಂತೆ ಸರಿ ಸುಮಾರು 600 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. * ಪ್ರಧಾನಿ ಮೋದಿ ಅವರು ಗೋವಾ ವಿಮೋಚನಾ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಲ್ಲಿನ ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌, ದಕ್ಷಿಣ ಗೋವಾ ಜಿಲ್ಲೆಯ ಹೊಸ ಆಸ್ಪತ್ರೆ, ಮೋಪಾ ವಿಮಾನ ನಿಲ್ದಾಣದಲ್ಲಿನ ಕೌಶಲಗಳ ಅಭಿವೃದ್ಧಿ ಕೇಂದ್ರ ಮತ್ತು ಮ್ಯಾಂಗ್ರೊದ ದಬೋಲಿಂ-ನವೇಲಿಂನಲ್ಲಿ ಗ್ಯಾಸ್‌-ಇನ್‌ಸ್ಯುಲೇಟೆಡ್‌ ಸಬ್‌ಸ್ಟೇಷನ್‌ ಈ ಎಲ್ಲವನ್ನು ಉದ್ಘಾಟಣೆ ಮಾಡಿದರು. * ಪ್ರಧಾನಿ ಮೋದಿ ಅವರು ಗೋವಾದ ಪಣಜಿಯಲ್ಲಿನ ಹುತಾತ್ಮರ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸಿ, ನಂತರ ಅಲ್ಲಿನ ಸೇಲ್‌ ಪರೇಡ್‌ ಹಾಗೂ ವೈಮಾನಿಕ ಪ್ರದರ್ಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. * ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 19 ರಂದು ಗೋವಾ, ದಮನ್ ಮತ್ತು ದಿಯು ವಿಮೋಚನಾ ದಿನ ಆಚರಿಸಲಾಗುತ್ತದೆ, ಗೋವಾ ವಿಮೋಚನಾ ದಿನವನ್ನು ಭಾರತೀಯ ಸಶಸ್ತ್ರ ಪಡೆಗಳು ಪೋರ್ಚುಗೀಸ್ ಆಳ್ವಿಕೆಯ ಗೋವಾವನ್ನು ಸ್ವಾಧೀನಪಡಿಸಿಕೊಂಡಿರುವ ಸವಿ ನೆನಪಿಗಾಗಿ ಆಚರಣೆ ಮಾಡಲಾಗುತ್ತದೆ, ಈ ದಿನವು ಭಾರತ ಯುರೋಪಿಯನ್ ಆಳ್ವಿಕೆಯಿಂದ ಸಂಪೂರ್ಣವಾಗಿ ಮುಕ್ತವಾಯಿತು ಎಂದು ತಿಳಿಸುತ್ತದೆ. * ಈ ಹಿಂದೆ 1947 ರಲ್ಲಿ ಭಾರತದ ಬಹುಪಾಲು ಬ್ರಿಟಿಷರ ಆಳ್ವಿಕೆಯಿಂದ ವಿಮೋಚನೆಗೊಂಡಿತು, ಆದರೆ ಗೋವಾ ಪ್ರಾಂತ್ಯವು ಅವಾಗ ಇನ್ನು ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಿತ್ತು. ಆದರೆ 1961 ರ ಡಿಸೆಂಬರ್. 19 ರಂದು ರಾಜ್ಯವು 451 ವರ್ಷಗಳ ಕಾಲ ಪೋರ್ಚುಗೀಸ್ ಅಧಿಕಾರದಿಂದ ವಿಮೋಚನೆಗೊಂಡಿತು ಈ ಹಿನ್ನಲೆಯಿಂದಾಗಿ ಪ್ರತಿ ವರ್ಷ ಡಿಸೆಂಬರ್. 19 ರಂದು ಗೋವಾ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ.