Job Description: * ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ನ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಹಂತಕ್ಕೆ ತಲುಪಿದ ಭಾರತದ ಕೆ. ಶ್ರೀಕಾಂತ್ ಅವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ, ಈ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಹಂತಕ್ಕೆ ತಲುಪಿದ ಭಾರತದ ಮೊದಲ ಪುರುಷ ಷಟ್ಲರ್ ಇವರಾಗಿದ್ದಾರೆ. * ಭಾರತದ ಕೆ.ಶ್ರೀಕಾಂತ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾರತದ ಮೊದಲ ಪುರುಷ ಷಟ್ಲರ್ ಆಗಿದ್ದಾರೆ, ಈ ಹಿಂದೆ 1983 ರಲ್ಲಿ ಪ್ರಕಾಶ್ ಪಡುಕೋಣೆ, ಹಾಗೂ 2019 ರಲ್ಲಿ ಸಾಯಿ ಪ್ರಣೀತ್ ಅವರು ಕಂಚಿನ ಪದಕವನ್ನು ಜಯಿಸಿದ್ದರು. * ಈ ಟೂರ್ನಿಯ ಫೈನಲ್ ಪಂದ್ಯದ ಹಣಾಹಣಿಯಲ್ಲಿ 12 ನೇ ಶ್ರೇಯಾಂಕದ ಆಟಗಾರ ಕೆ. ಶ್ರೀಕಾಂತ್ ಅವರು ಸಿಂಗಾಪುರದ ಲೋಹ ಕೀನ್ ಯಿವ್ ಅವರ ಎದುರು ಸೋಲ ಅನುಭವಿಸಿದ್ದಾರೆ. ಭಾರತಕ್ಕೆ ಈ ಟೂರ್ನಿಯ ಪುರುಷರ ವಿಭಾಗದಲ್ಲಿ 2 ಪದಕಗಳು ಲಭಿಸಿವೆ, ಒಂದು ಕೆ. ಶ್ರೀಕಾಂತ್ ಅವರ ಪಡೆದಿರುವ ಬೆಳ್ಳಿ ಪದಕ ಮತ್ತೊಂದು ಲಕ್ಷ್ಯ ಸೇನ್‌ ಅವರು ಸೆಮೀಸ್‌ನಲ್ಲಿ ಸೋಲ ಅನುಭವಿಸುವ ಮೂಲಕ ಕಂಚಿನ ಪದಕವನ್ನು ಪಡೆದಿದ್ದಾರೆ. * ಭಾರತದ ಕೆ.ಶ್ರೀಕಾಂತ್ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದೇಶಕ್ಕೆ 4 ನೇ ಬೆಳ್ಳಿ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಈ ಹಿಂದೆ 2015 ರಲ್ಲಿ ಸೈನಾ ನೆಹ್ವಾಲ್ ಅವರು ಒಂದು ಬಾರಿ ಈ ಸಾಧನೆ ಮಾಡಿದ್ದರು, ಅದೇ ರೀತಿಯಲ್ಲಿ 2017, ಹಾಗೂ 2018 ರಲ್ಲಿ ಪಿವಿ ಸಿಂಧು ಅವರು ಎರಡು ಬಾರಿ ಈ ಸಾಧನೆ ಮಾಡಿದ್ದಾರೆ.