Job Description: * ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ, ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ R. L. ಜಾಲಪ್ಪನವರು ವಿಧಿವಶರಾಗಿದ್ದಾರೆ, ಇವರು ತಮ್ಮ 96 ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ. * R. L. ಜಾಲಪ್ಪ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುತ್ತಿದ್ದರು, ಇವರು ನಾಲ್ಕು(4) ಬಾರಿ ಲೋಕಸಭಾ ಸದಸ್ಯರಾಗಿದ್ದರು, ಈ ಹಿಂದೆ 1996 ರಲ್ಲಿ ಹೆಚ್ ಡಿ ದೇವೇಗೌಡರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ, ಇವರ ನಿಧನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಂತಾಪವನ್ನು ಸೂಚಿಸಿದ್ದಾರೆ. * ಆರ್. ಲಕ್ಷ್ಮೀನಾರಾಯಣಪ್ಪ(RL) ಜಾಲಪ್ಪ ಅವರು 1925 ರ ಅಕ್ಟೋಬರ್. 19 ರಂದು ಜನಿಸಿ, 2021 ರ ಡಿಸೆಂಬರ್. 17 ನಿಧನರಾಗಿದ್ದಾರೆ, ಇವರು ಒಬ್ಬ ಭಾರತೀಯ ರಾಜಕಾರಣಿಯಾಗಿದ್ದರು, ಇವರು ಕರ್ನಾಟಕ ರಾಜ್ಯದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ನಾಯಕರಾಗಿದ್ದರು, ಜಾಲಪ್ಪ ಅವರು 1979 ರವರೆಗೆ INC ಸದಸ್ಯರಾಗಿದ್ದರು, ನಂತರ ಡಿ. ದೇವರಾಜ್ ಅರಸ್ ಅವರೊಡನೆ ಸೇರಿ ಕರ್ನಾಟಕ ಕ್ರಾಂತಿ ರಂಗವನ್ನು ರಚಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ತೊರೆದರು, ಹತ್ತು ವರ್ಷಗಳ ನಂತರ, ಅವರು ಜನತಾ ದಳಪಕ್ಷವನ್ನು ಸೇರಿದರು, ಆ ಪಕ್ಷದಿಂದ 1996 ರಲ್ಲಿ ಚಿಕ್ಕಬಳ್ಳಾಪುರದಿಂದ ಲೋಕಸಭೆಗೆ, ಭಾರತೀಯ ಸಂಸತ್ತಿನ ಕೆಳಮನೆಗೆ ಆಯ್ಕೆಯಾಗಿ 1996 ರಿಂದ ಜನವರಿ 1998 ರವರೆಗೆ ಕೇಂದ್ರ ಜವಳಿ ಸಚಿವರಾಗಿ ಸೇವೆ ಸಲ್ಲಿಸಿದರು, ಮತ್ತೇ ಇವರು INC ಪಕ್ಷಕ್ಕೆ ಸೇರುವ ಸಲುವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು, ಇದಾದ ಬಳಿಕ ಮತ್ತೊಮ್ಮೆ ಲೋಕಸಭೆಗೆ ಚುನಾಯಿತರಾಗಿ 2009 ರವರೆಗೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.