Job Description: * ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 1971ರಲ್ಲಿ ಯುದ್ಧ ಗೆದ್ಧ 50ನೇ ವರ್ಷಾಚರಣೆ ಸಮಾರಂಭದಲ್ಲಿ ಅಂದರೆ ಬಾಂಗ್ಲಾದೇಶದ ವಿಮೋಚನೆಗಾಗಿ ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದ ಸಮಯದಲ್ಲಿ, ಆ ಯುದ್ಧದಲ್ಲಿ ಯೋಧರ ಬಲಿದಾನದ ಸ್ಮರಣೆಗಾಗಿ ಆ ಸಂಧರ್ಭದಲ್ಲಿ ಬಳಸಿರುವ 'ಮಿಗ್-21' ಏರ್‌ಕ್ರಾಫ್ಟ್‌ನ ಪ್ರತಿಕೃತಿಯನ್ನು ಬಾಂಗ್ಲಾದೇಶದ ರಾಷ್ಟ್ರಪತಿ ಅಬ್ದುಲ್ ಹಮೀದ್ ಅವರಿಗೆ ನೀಡಿದ್ದಾರೆ. * ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು '3' ದಿನಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ, ಹಾಗೂ 1971ರಲ್ಲಿ ಯುದ್ಧ ಗೆದ್ಧ 50ನೇ ವರ್ಷಾಚರಣೆಯ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. * '1971ರ ಯುದ್ಧ ಸಂಧರ್ಬದಲ್ಲಿ ಬಳಸಲಾಗಿರುವ 'ಮಿಗ್ 21' ವಿಮಾನವನ್ನು ಬಾಂಗ್ಲಾದೇಶದ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರು ತಿಳಿಸಿದ್ದಾರೆ. * ಇದೀಗ ಭಾರತ ಸರ್ಕಾರವು ನೂತನ್ ಇಂಡಿಯಾ-ಬಾಂಗ್ಲಾದೇಶ ಮೈತ್ರಿ ಮುಕ್ತಿಜೋಧ ಸೋನಾತನ್ ವಿದ್ಯಾರ್ಥಿವೇತನ ಯೋಜನೆಯನ್ನು ನೀಡಲು ತೀರ್ಮಾನಿಸಿದೆ, ಇದನ್ನು ಬಾಂಗ್ಲಾದೇಶದ ಮುಕ್ತಿಜೋಧಗಳ ಉತ್ತರಾಧಿಕಾರಿಗಳಿಗೆ ನೀಡಲಾಗುತ್ತದೆ. * ಈ ಹಿಂದೆ 2017 ರ ಏಪ್ರಿಲ್'ನಲ್ಲಿ ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಭೇಟಿ ನೀಡಿರುವ ಸಂಧರ್ಭದಲ್ಲಿ ಈ ವಿದ್ಯಾರ್ಥಿವೇತನ ಯೋಜನೆಗೆ ಚಾಲನೆ ನೀಡಿದ್ದಾರೆ, ಈ ಯೋಜನೆ ಅಡಿಯಲ್ಲಿ ಈ ಹಿಂದಿನ 5 ವರ್ಷಗಳಲ್ಲಿ ಸುಮಾರು 10,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಒದಗಿಸಲಾಗಿದೆ. ಅದರಲ್ಲಿ ಪೂರ್ವ ಪದವಿಧರರಿಗೆ ಒಂದು ಬಾರಿ 50,000 ರೂ. ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 20,000 ರೂ. ವಿದ್ಯಾರ್ಥಿ ವೇತನ ಸಿಗಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಶೃಂಗ್ಲಾ ಅವರು ಮಾಹಿತಿ ನೀಡಿದ್ದಾರೆ.