Job Description: * ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ಭಾರತೀಯ ಸೇನಾ ಪಡೆಯ '3' ವಿಭಾಗದ ಮುಖ್ಯಸ್ಥ ಹುದ್ದೆಯಾಗಿರುವ ಚೀಫ್ಸ್ ಆಫ್ ಸ್ಟಾಫ್ ಕಮಿಟಿಯ (COSC) ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. * ಇತ್ತೀಚಿಗೆ ಹೆಲಿಕಾಫ್ಟರ್ ಅಪಘಾತದಲ್ಲಿ ಮೃತಪಟ್ಟಿರುವ ಜನರಲ್ ಬಿಪಿನ್ ರಾವತ್ ಅವರ ಸ್ಥಾನಕ್ಕೆ ಎಂ.ಎಂ. ನರವಣೆ ಅವರನ್ನು ನೇಮಕ ಮಾಡಲಾಗಿದೆ. * ಚೀಫ್ ಆಫ್ ಆರ್ಮಿ ಸ್ಟಾಫ್(COAS) ಜನರಲ್ ಬಿಪಿನ ರಾವತ್ ಅವರನ್ನು ಈ ಹಿಂದೆ 2019ರಲ್ಲಿ ಮೂರು(3) ಸೇನೆಗಳ ಮುಖ್ಯಸ್ಥರನ್ನಾಗಿ ಅಂದರೆ CDS ಆಗಿ ನೇಮಕ ಮಾಡಲಾಗಿತ್ತು, ಜನರಲ್ ಬಿಪಿನ ರಾವತ್ ಅವರಿಂದ ತೆರವಾದ ಈ COAS ಸ್ಥಾನಕ್ಕೆ 2019ರ ಡಿಸೆಂಬರ್. 31 ರಂದು ಎಂ.ಎಂ. ನರವಣೆ ಅವರನ್ನು ನೇಮಕ ಮಾಡಲಾಗಿತ್ತು. ಎಂ.ಎಂ. ನರವಣೆ ಅವರು ಸುಮಾರು 2 ವರ್ಷಗಳ ಅವಧಿಗೆ COAS ಆಗಿ ಸೇವೆ ಸಲ್ಲಿಸಿದ್ದಾರೆ, ಇದೀಗ ನರವಣೆ ಅವರು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಬಡ್ತಿ ಹೊಂದಿದ್ದಾರೆ, ಕೇಂದ್ರ ಸಚಿವ ಸಂಪುಟದ ಭದ್ರತಾ ಸಮಿಯಲ್ಲಿ ಚರ್ಚೆಮಾಡಿ ಅಂತಿಮವಾಗಿ ಎಂ.ಎಂ. ನರವಣೆ ಅವರನ್ನು CDS ಸ್ಥಾನಕ್ಕೆ ನೇಮಕ ಮಾಡಲಾಗಿದೆ. * ಈ ಹಿಂದೆ ಬಿಪಿನ್‌ ರಾವತ್‌ ಅವರು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆ, ಹಾಗೂ ಸಶಸ್ತ್ರ ಪಡೆಗಳ ಮುಖ್ಯಸ್ಥ ಹುದ್ದೆ ಇವೆರಡನ್ನೂ ನಿರ್ವಹಣೆ ಮಾಡುತಿದ್ದರು. * ಎಂ.ಎಂ. ನರವಣೆ ಅವರ ಮಾಹಿತಿ: ಎಂಎಂ ನರವಣೆ ತಂದೆ ಮಕುಂದ್ ನರವಣೆ ವಾಯುಸೇನೆಯ ವಿಂಗ್ ಕಮಾಂಡರ್ ಆಗಿ ನಿವೃತ್ತರಾಗಿದ್ದಾರೆ. ಹಾಗೂ ಅವರ ತಾಯಿ ಆಲ್ ಇಂಡಿಯಾ ರೇಡಿಯೋದ ವಾಚಕಿಯಾಗಿ ಸೇವೆ ಸಲ್ಲಿಸಿದ್ದಾರೆ, ಮೂಲತಃ ಇವರು ಮಹಾರಾಷ್ಟ್ರದವರು. * ಜನರಲ್ ಮನೋಜ್ ಮುಕುಂದ್ ನರವಣೆ PVSM AVSM SM VSM ADC ಅವರು ಭಾರತೀಯ ಸೇನಾ ಜನರಲ್ ಆಗಿ, ಪ್ರಸ್ತುತ ಸೇನಾ ಸಿಬ್ಬಂದಿಯ 27ನೇ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇದೀಗ ಇವರು 2021 ರ ಡಿಸೆಂಬರ್. 15 ರಿಂದ ಚೀಫ್ಸ್ ಆಫ್ ಸ್ಟಾಫ್ ಸಮಿತಿಯ ತಾತ್ಕಾಲಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. * ಎಂ.ಎಂ. ನರವಣೆ ಅವರಿಗೆ: 2015 ರಲ್ಲಿ ವಿಶಿಷ್ಠ ಸೇವಾ ಪದಕ, ಸೇನಾ ಪದಕ, ಮತ್ತೇ 2017 ರಲ್ಲಿ ಅತಿ ವಿಶಿಷ್ಟ ಸೇವಾ ಪದಕ, ಮತ್ತೇ 2019 ರಲ್ಲಿ ಪರಮವಿಶಿಷ್ಟ ಸೇವಾ ಪದಕ ಲಭಿಸಿವೆ.