Job Description: * ಪ್ರಸ್ತುತ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಮೂಲದವರಾಗಿರುವ ಲೀನಾ ನಾಯರ್ ಅವರು ಇದೀಗ ಫ್ರಾನ್ಸ್‌ನ ಫ್ಯಾಷನ್ ಕಂಪನಿ ಷನಲ್‌'ನ ಜಾಗತಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(CEO)ಯಾಗಿ ಅಧಿಕಾರವನ್ನು ಸ್ವೀಕರಿಸಲಿದ್ದಾರೆ. * ಲೀನಾ ನಾಯರ್ ಅವರು ಇಲ್ಲಿಯವರೆಗೆ ಯುನಿಲಿವರ್‌ ಕಂಪನಿಯ ಅತ್ಯಂತ ಕಿರಿಯ ವಯಸ್ಸಿನ, ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಲೀನಾ ನಾಯರ್ ಅವರು ಷನಲ್ ಕಂಪನಿ ಸೇರುವ ಹಿನ್ನಲೆಯಿಂದಾಗಿ ಯುನಿಲಿವರ್‌ ಕಂಪನಿಗೆ ರಾಜೀನಾಮೆ ಸಲ್ಲಿಸಿದ್ದಾರೆ. * ಲೀನಾ ನಾಯರ್ ಅವರು 1969 ರಲ್ಲಿ ಜನಿಸಿದ್ದಾರೆ ಇವರು ಬ್ರಿಟಿಷ್ ಭಾರತೀಯ ವ್ಯಾಪಾರ ಕಾರ್ಯನಿರ್ವಾಹಕರಾಗಿದ್ದಾರೆ, ಇವರು ಶನೆಲ್‌(Chanel)ನ ಮೊದಲ ಮಹಿಳೆ ಮತ್ತು ಅತ್ಯಂತ ಕಿರಿಯ CEO. ಈ ಮೊದಲು ನಾಯರ್ ಅವರು ಯೂನಿಲಿವರ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಮತ್ತು ಯೂನಿಲಿವರ್ ಲೀಡರ್‌ಶಿಪ್ ಎಕ್ಸಿಕ್ಯೂಟಿವ್‌ನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು, ಇವರು ಯೂನಿಲಿವರ್‌ನ ಮಾನವ ಬಂಡವಾಳಕ್ಕೆ ಜವಾಬ್ದಾರೀಯನ್ನು ಹೊಂದಿದ್ದರು, ಇದು 190 ದೇಶಗಳಲ್ಲಿ ಹರಡಿರುವ ಬಹು ನಿಯಂತ್ರಣ ಹಾಗೂ ಕಾರ್ಮಿಕ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತದೆ. ಲೀನಾ ನಾಯರ್ ಅವರ ನಾಯಕತ್ವದಲ್ಲಿ ಯೂನಿಲಿವರ್ 54 ದೇಶಗಳಲ್ಲಿ ಆಯ್ಕೆಯ ಪ್ರಥಮ FMCG ಪದವೀಧರ ಉದ್ಯೋಗದಾತ ಎಂದು ಹೆಸರಿಸಲಾಗಿದೆ. * ಶನೆಲ್(Chanel)ಕಂಪನಿ: ಇದೊಂದು ಫ್ರೆಂಚ್ ಐಷಾರಾಮಿ ಫ್ಯಾಶನ್ ಹೌಸ್ ಆಗಿದೆ, ಇದನ್ನು 1910 ರಲ್ಲಿ ಫ್ರಾನ್ಸ್'ನ ಪ್ಯಾರಿಸ್'ನಲ್ಲಿ ಕೌಟೂರಿಯೆರ್ ಕೊಕೊ ಶನೆಲ್ ಅವರು ಸ್ಥಾಪಿಸಿದ್ದಾರೆ. ಇದು ತನ್ನ ಪ್ರಧಾನ ಕಛೇರಿಯನ್ನು ಲಂಡನ್, ಯುನೈಟೆಡ್ ಕಿಂಗ್ಡಮ್'ನಲ್ಲಿ ಹೊಂದಿದೆ, ಈ ಕಂಪನಿಯು ಮಹಿಳೆಯರ ಸಿದ್ಧ ಉಡುಪುಗಳು, ಐಷಾರಾಮಿ ವಸ್ತುಗಳು ಹಾಗೂ ಪರಿಕರಗಳ ಮೇಲೆ ಕೇಂದ್ರೀಕರಿಸುತ್ತದೆ. * 2016 ರ ಫೆಬ್ರವರಿಯಿಂದ ಅಲೈನ್ ವರ್ತೈಮರ್ ಅವರು ಶನೆಲ್(Chanel)ಕಂಪನಿ CEO ಆಗಿದ್ದಾರೆ.