Job Description: * ಪ್ರಸ್ತುತ ಭಾರತದ ಪೂರ್ಣಿಮಾ ಪಾಂಡೆ ಅವರು ಉಜ್ಬೇಕಿಸ್ತಾನದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. * ಭಾರತದ ಪೂರ್ಣಿಮಾ ಪಾಂಡೆ ಅವರು ಮಹಿಳೆಯರ 87+ ಕೆಜಿ ವಿಭಾಗದಲ್ಲಿ 229 ಕೆ.ಜಿ ಬಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಜಯಿಸಿದ್ದಾರೆ, ಇದೀಗ ಇವರು ಒಟ್ಟಾರೆ '8' ರಾಷ್ಟ್ರೀಯ ದಾಖಲೆಗಳನ್ನು ಬರೆದಿದ್ದಾರೆ, ಅಷ್ಟೇ ಅಲ್ಲದೇ ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ನೇರ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. * ಪೂರ್ಣಿಮಾ ಪಾಂಡೆ ಅವರು ಸ್ನ್ಯಾಚ್ ವಿಭಾಗದಲ್ಲಿ '2' ಹಾಗೂ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ತಲಾ '3' ಸೇರಿ ಒಟ್ಟಾರೆ ಎಂಟು(8) ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದಾರೆ. * ಅನುರಾಧಾ ಪಾವುಂರಾಜ್ ಮಹಿಳೆಯರ 87 ಕೆ.ಜಿ ವಿಭಾಗದಲ್ಲಿ 195 ಕೆ.ಜಿ ಭಾರ ಎತ್ತುವ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. * ಭಾರತದ ಲವ್‌ಪ್ರೀತ್ ಸಿಂಗ್ ಅವರು ಇದೇ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್'ನ ಪುರುಷರ 109 ಕೆ.ಜಿ ವಿಭಾಗದಲ್ಲಿ 348 ಕೆ.ಜಿ ಬಾರ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಗೆದಿದ್ದಾರೆ, ಹಾಗೂ ಸ್ನ್ಯಾಚ್ ವಿಭಾಗದಲ್ಲಿ '3' ಹಾಗೂ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ತಲಾ '1' ದಾಖಲೆಯನ್ನು ಬರೆದಿದ್ದಾರೆ. * ಲವ್‌ಪ್ರೀತ್ ಸಿಂಗ್ ಅವರು ಏಷ್ಯನ್ ಯೂತ್ ಹಾಗೂ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್'ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು? * ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್'ನ ಎಲ್ಲ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ವೇಟ್‌ಲಿಫ್ಟರ್‌ಗಳು ಮುಂದಿನ ವರ್ಷ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಕಾಮನ್‌ವೆಲ್ತ್ ಗೇಮ್ಸ್‌ಗೆ ನೇರ ಪ್ರವೇಶ ಪಡೆಯಲಿದ್ದಾರೆ.