Job Description: * ಪ್ರಸ್ತುತ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಭೂತಾನ್‌ನ 114 ನೇ ರಾಷ್ಟ್ರೀಯ ದಿನಾಚರಣೆ ಸಂದರ್ಭದಲ್ಲಿ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವ ಪುರಸ್ಕಾರ 'ಆರ್ಡರ್‌ ಆಫ್ ದಿ ಡ್ರಕ್‌ ಗ್ಯಾಲ್ಪೊ'ವನ್ನು ಘೋಷಣೆ ಮಾಡಿದ್ದಾರೆ, ಈ ಮಾಹಿತಿಯನ್ನು ಭೂತಾನ್ ಪ್ರಧಾನಿ ಲೊಟೆ ಶೇರಿಂಗ್ ಸಾಮಾಜಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ, ಅಷ್ಟೇ ಅಲ್ಲದೇ ಭೂತಾನ್‌ನ ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. * ಮೋದಿ ಅವರು 'ಅತ್ಯುನ್ನತ ನಾಗರಿಕ ಗೌರವಕ್ಕೆ ನಿಜಕ್ಕೂ ಅರ್ಹರು ಎಂದು ತಿಳಿಸಿದ್ದಾರೆ, ನರೇಂದ್ರ ಮೋದಿ ಅವರು ಭೂತಾನ್ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ನೀಡಿದ್ದಕ್ಕಾಗಿ ಅಲ್ಲಿನ ಜನತೆಗೆ ಧನ್ಯವಾದವನ್ನು ತಿಳಿಸಿದ್ದಾರೆ. * ಇಲ್ಲಿಯವರೆಗೆ ಪ್ರಧಾನಿ ಮೋದಿ ಅವರಿಗೆ ಸಿಕ್ಕಿರುವ ಪ್ರಶಸ್ತಿಗಳು: - 2016 ರಲ್ಲಿ ಸೌದಿ ಅರೇಬಿಯಾ ಮುಸ್ಲಿಮೇತರ ಗಣ್ಯರಿಗೆ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ. - 2016 ರಲ್ಲಿ ಅಫ್ಘಾನಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ. - 2018 ರಲ್ಲಿ ವಿದೇಶಿ ಗಣ್ಯರಿಗೆ ಪ್ಯಾಲೆಸ್ತೀನ್‌ ನೀಡುವ ಅತ್ಯುನ್ನತ ಪ್ರಶಸ್ತಿ. - 2019 ರಲ್ಲಿ ಯುಎಇ ನೀಡುವ ಆರ್ಡರ್‌ ಆಫ್ ಝಯೇದ್‌ ಪ್ರಶಸ್ತಿ, ಮತ್ತು ರಷ್ಯಾದ ಆರ್ಡರ್‌ ಆಫ್ ಸೈಂಟ್‌ ಆಯಂಡ್ರೂಸ್ ಪ್ರಶಸ್ತಿ, ಹಾಗೂ ಮಾಲ್ಡೀವ್ಸ್‌ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವ ಪ್ರಶಸ್ತಿ, ಹಾಗೂ ಬಹರೈನ್‌ನ ಕಿಂಗ್‌ ಹಮತ್‌ ಆರ್ಡರ್‌ ಆಫ್ ದಿ ರಿನಯಸ್ಸೆನ್ಸ್‌-ಫ‌ಸ್ಟ್‌ ಕ್ಲಾಸ್‌ ಎಂಬ ಗೌರವ ಪ್ರಶಸ್ತಿ ಲಭಿಸಿವೆ. - 2020 ರಲ್ಲಿ ಅಮೇರಿಕದ ಪ್ರತಿಷ್ಥಿತ 'ಲೀಜನ್‌ ಆಫ್‌ ಮೆರಿಟ್‌' ಗೌರವ ಪ್ರಶಸ್ತಿ ಲಭಿಸಿದೆ. ಇನ್ನು ಹೀಗೆ ಹಲವು ಪ್ರಶಸ್ತಿಗಳು ಸಂದಿವೆ. * ಆರ್ಡರ್ ಆಫ್ ದಿ ಡ್ರ್ಯಾಗನ್ ಕಿಂಗ್ (ಡ್ರುಕ್ ಗ್ಯಾಲ್ಪೋ) ಭೂತಾನ್ ಸಾಮ್ರಾಜ್ಯದ ಅತ್ಯುನ್ನತ ಗೌರವದ ಪ್ರಶಸ್ತಿಯಾಗಿದೆ, ಇದನ್ನು ಜನರಿಗೆ ಮತ್ತು ಭೂತಾನ್ ಸಾಮ್ರಾಜ್ಯಕ್ಕೆ ಜೀವಮಾನದ ಸೇವೆಯನ್ನು ಗುರುತಿಸಿ ನೀಡಲಾಗುತ್ತದೆ.