Job Description: * ತಮಿಳುನಾಡು ಸರ್ಕಾರವು ತಮಿಳು ತಾಯಿಯನ್ನು ಶ್ಲಾಘಿಸುವ 'ತಮಿಳು ತಾಯ್ ವಾಳ್ತು' ಹಾಡನ್ನು ನಾಡಗೀತೆಯಾಗಿ ಘೋಷಣೆ ಮಾಡಿದೆ, ಅಷ್ಟೇ ಅಲ್ಲದೇ ಈ ಹಾಡನ್ನು ಹಾಡುವ ವೇಳೆ ಎಲ್ಲರು ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಆದೇಶ ಹೊರಡಿಸಲಾಗಿದೆ. * ಇತ್ತೀಚಿಗೆ ಮದ್ರಾಸ್ ಹೈಕೋರ್ಟ್ 'ತಮಿಳ್ ತಾಯ್ ವಾಳ್ತು' ಇದು ರಾಷ್ಟ್ರಗೀತೆ ಅಲ್ಲ ಕೇವಲ ಪ್ರಾರ್ಥನಾ ಗೀತೆಯಾಗಿದೆ ಇದನ್ನು ಹಾಡುವ ವೇಳೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸುವ ಅಗತ್ಯವಿಲ್ಲ ಎಂದು ತೀರ್ಪುನ್ನು ನೀಡಿತ್ತು. ಆದರೆ ಇದೀಗ ತಮಿಳುನಾಡು ಸರ್ಕಾರವು 'ತಮಿಳ್ ತಾಯ್ ವಾಳ್ತು' ಈ ಹಾಡಿಗೆ ನಾಡಗೀತೆಯ ಸ್ಥಾನಮಾನವನ್ನು ನೀಡಿ ಆದೇಶ ಹೊರಡಿಸಿದೆ. * ಅಷ್ಟೇ ಅಲ್ಲದೇ 55 ಸೆಕೆಂಡುಗಳ ಈ ಹಾಡನ್ನು ಹಾಡುವಾಗ ವಿಕಲಚೇತನರನ್ನು ಬಿಟ್ಟು ಉಳಿದ ಎಲ್ಲರೂ ಕಡ್ಡಾಯವಾಗಿ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ತಮಿಳನಾಡು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸುತ್ತಿದೆ ರಾಜ್ಯದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಹೇಳಿಕೆ ನೀಡಿದ್ದಾರೆ. * ಪ್ರಸ್ತುತ ತಮಿಳನಾಡು ರಾಜ್ಯ ಸರ್ಕಾರದ ಆದೇಶದ ಮೇರೆಗೆ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಹಾಗೂ ಇನ್ನಿತರ ಸಾರ್ವಜನಿಕ ವೇದಿಕೆಗಳಲ್ಲಿ ಯಾವುದೇ ಕಾರ್ಯಕ್ರಮವನ್ನು ಆರಂಭಿಸುವ ಮೊದಲು ಈ ಹಾಡನ್ನು ಹದಿ ಅದಕ್ಕೆ ಗೌರವ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರವು ಆದೇಶದಲ್ಲಿ ಉಲ್ಲೇಖಿಸಿದೆ. * ತಮಿಳುನಾಡು ರಾಜ್ಯ: ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡು ತನ್ನ ದ್ರಾವಿಡ ಶೈಲಿಯ ಹಿಂದೂ ದೇವಾಲಯಗಳಿಗೆ ಹೆಸರುವಾಸಿಯಾಗಿರುವ ರಾಜ್ಯವಾಗಿದೆ. ಮಧುರೈನಲ್ಲಿ, ಮೀನಾಕ್ಷಿ ಅಮ್ಮನ್ ದೇವಾಲಯವು ವರ್ಣರಂಜಿತ ಆಕೃತಿಗಳಿಂದ ಅಲಂಕರಿಸಲ್ಪಟ್ಟ ಎತ್ತರದ ಗೋಪುರಗಳನ್ನು ಹೊಂದಿದೆ. ತಮಿಳುನಾಡಿನ ಪಂಬನ್ ದ್ವೀಪದಲ್ಲಿ, ರಾಮನಾಥಸ್ವಾಮಿ ದೇವಾಲಯವು ಯಾತ್ರಾ ಸ್ಥಳವಾಗಿದೆ, ಹಾಗೂ ಭಾರತದ ದಕ್ಷಿಣದ ತುದಿಯಲ್ಲಿರುವ ಕನ್ಯಾಕುಮಾರಿ ಪಟ್ಟಣವು ಧಾರ್ಮಿಕ ಸೂರ್ಯೋದಯಗಳ ತಾಣವಾಗಿದೆ, ಇದಷ್ಟೇ ಅಲ್ಲದೇ ತಮಿಳುನಾಡಿನ ರಾಜಧಾನಿ ಚೆನ್ನೈ 1644 ರ ವಸಾಹತುಶಾಹಿ ಫೋರ್ಟ್ ಸೇಂಟ್ ಜಾರ್ಜ್ ಸೇರಿ ಅಲ್ಲಿನ ಕಡಲತೀರಗಳು ಹೆಗ್ಗುರುತುಗಳಿಗೆ ಹೆಸರುವಾಸಿಯಾಗಿವೆ.