Job Description: * ಈ ಹಿಂದೆ 1971 ರಲ್ಲಿ ಪಾಕಿಸ್ತಾನ ಸೈನಿಕರಿಂದ ಧ್ವಂಸವಾಗಿರುವ ಕಾಳಿಮಂದಿರವನ್ನು 50 ವರ್ಷಗಳ ಬಳಿಕ ಪುನರ್ ನಿರ್ಮಾಣಮಾಡಲಾಗಿದೆ, ಈ ಶ್ರೀರಾಮನ ಕಾಳಿ ಮಂದಿರವನ್ನು ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಿದ್ದಾರೆ, ಇದೀಗ ಈ ಐತಿಹಾಸಿಕ ದೇವಾಲಯವು ಭಾರತ ಮತ್ತು ಬಾಂಗ್ಲಾದೇಶದ ಜನರ ನಡುವಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಬಾಂಧವ್ಯದ ಸಂಕೇತವಾಗಿದೆ ಎಂದಿದ್ದಾರೆ. * 1971 ರಲ್ಲಿನ ಯುದ್ಧದಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಪಡೆದುಕೊಂಡಿತ್ತು, ಇದೀಗ ಅದಕ್ಕೆ 50 ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮ ಈ ಆಚರಣೆಯಲ್ಲಿ ಬಾಂಗ್ಲಾ ರಾಷ್ಟ್ರಪತಿ ಎಂ ಅಬ್ದುಲ್ ಹಮೀದ್ ಅವರ ಆಹ್ವಾನದ ಮೇರೆಗೆ ಭಾರತದ ರಾಷ್ಟ್ರಪತಿ ಕೋವಿಂದ್ ಅವರು ಬಾಂಗ್ಲಾದೇಶ ಭೇಟಿ ನೀಡಿದ್ದಾರೆ. * ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೃದಯಭಾಗದಲ್ಲಿರುವ ಕಾಳಿ ಮಂದಿರವನ್ನು ಪಾಕಿಸ್ತಾನಿ ಸೈನಿಕರು ದೇಶದಲ್ಲಿನ ಪ್ರತಿರೋಧ ಚಳುವಳಿಯನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾ ಪ್ರಜೆಗಳ ಮೇಲೆ ದಾಳಿ ಮಾಡಲು "ಆಪರೇಷನ್ ಸರ್ಚ್‌ಲೈಟ್" ಎಂಬ ಕಾರ್ಯವನ್ನು ಆರಂಭಿಸಿದರು, ಅದೇ ಸಂಧರ್ಭದಲ್ಲಿ 1971 ರ ಮಾರ್ಚ್. 25 ರಂದು ರಾಮನ ಕಾಳಿ ಮಂದಿರ ಸೇರಿ ಹೀಗೆ ಹಲವಾರು ಪ್ರಮುಖ ದೇವಾಲಯಗಳಿಗೆ ಬೆಂಕಿಯನ್ನಿಟ್ಟು ಹಾಳುಮಾಡಿದರು.