Job Description: * ಇದೀಗ ರಕ್ಷಣಾ ವಲಯಕ್ಕಾಗಿ ಕಾರ್ಯನಿರ್ವಹಿಸುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ಸಂಸ್ಥೆಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL) ಎಂಬ ಎರಡು ಸಂಸ್ಥೆಗಳ ಮಧ್ಯೆ 2,400 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿವೆ. * ಈ ಒಪ್ಪಂದದ ಪ್ರಕಾರ ಲಘು ಯುದ್ಧ ವಿಮಾನ LCA ತೇಜಸ್ Mk1A ಕಾರ್ಯಕ್ರಮಕ್ಕಾಗಿ 20 ರೀತಿಯ ವ್ಯವಸ್ಥೆಗಳ ಪೂರೈಸಲಾಗುವದು. ಇದು '5' ವರ್ಷಗಳ ಒಪ್ಪಂದವಾಗಿದೆ 2023 ರಿಂದ 2028 ರವರೆಗಿನ ಒಪ್ಪಂದವು 2,400 ಕೋಟಿ ರೂ.ನ ಮೌಲ್ಯವಾಗಿದೆ, ಈ ಒಪ್ಪಂದದ ಪ್ರಕಾರ ನಿರ್ಣಾಯಕ ಏವಿಯಾನಿಕ್ಸ್ ಲೈನ್ ರಿಪ್ಲೇಸಬಲ್ ಯುನಿಟ್‌ಗಳು, ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್‌ಗಳು ಮತ್ತು ರಾತ್ರಿ ಹಾರುವ ಎಲ್‌ಆರ್‌ಯುಗಳನ್ನು ಪೂರೈಸಲಾಗುತ್ತದೆ, ಬೆಂಗಳೂರಿನಲ್ಲಿರುವ HAL 'ನ ಪ್ರಧಾನ ಕಛೇರಿಯಿಂದ ಮಾಹಿತಿ ವರದಿಯಾಗಿದೆ. * ಪ್ರಸ್ತುತ HAL, DRDO, BEL 'ನಂತಹ ಭಾರತೀಯ ರಕ್ಷಣಾ ಸಂಸ್ಥೆಗಳ ನಡುವಿನ ಸಹಭಾಗಿತ್ವಕ್ಕೆ ಈ LCA ತೇಜಸ್ ಕಾರ್ಯಕ್ರಮವು ಒಂದು ಉದಾಹರಣೆ, ಈ ತೇಜಸ್ Mk1A ಗಾಗಿ 20 ವಿಧದ ನಿರ್ಣಾಯಕ ಏವಿಯಾನಿಕ್ಸ್ LRU ಗಳ ಅಭಿವೃದ್ಧಿ, ಹಾಗೂ ಪೂರೈಕೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿಯಾಗಲಿದೆ ಎಂದಿದ್ದಾರೆ. * BEL, ಬೆಂಗಳೂರು ಮತ್ತು ಹರಿಯಾಣ ಎರಡು ವಿಭಾಗಗಳು ಕಾರ್ಯಗತಗೊಳಿಸಲು ಈ 83 ತೇಜಸ್ Mk1A ಫೈಟರ್ ಫ್ಲೀಟ್‌ಗೆ ಈ ವ್ಯವಸ್ಥೆಗಳ ಪೂರೈಕೆ ಮಾಡಲಾಗುತ್ತದೆ, ಈ ಒಪ್ಪಂದದ ಪ್ರಕಾರ ಎಲ್ಲ ವಸ್ತುಗಳನ್ನು BEL ನಿಂದ HAL ಗೆ ವಿತರಿಸಲಾಗುತ್ತದೆ ಎಂದು ವರದಿಯಲ್ಲಿ ಪ್ರಕಟವಾಗಿದೆ. * BEL ನಿಂದ HAL ಗೆ ಇದೇ 2023-24 ರಿಂದ IAF(ಇಂಡಿಯನ್ ಏರ್ ಫೋರ್ಸ್)ಗೆ 83 ತೇಜಸ್ Mk1A ಆದೇಶದ ಅಡಿಯಲ್ಲಿ ವಿತರಣೆಗಳು ಆರಂಭವಾಗಲಿವೆ, ಈ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿನ ಯುದ್ಧವಿಮಾನವು ಸ್ವದೇಶಿ ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್‌ಗಳು, ಏರ್ ಡೇಟಾ ಕಂಪ್ಯೂಟರ್‌ಗಳನ್ನು ಒಳಗೊಂಡಿರಲಿವೆ, ಈ ವ್ಯವಸ್ಥೆಗಳನ್ನು DRDO ಮತ್ತು ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ವಿವಿಧ ಲ್ಯಾಬ್‌ಗಳು ಅಭಿವೃದ್ಧಿಪಡಿಸಿವೆ.