Job Description: * ಇದೀಗ 'ಶ್ರೇಷ್ಠ ಪದಾರ್ಪಣೆ ಕ್ರೀಡಾಪಟು' ಪ್ರಶಸ್ತಿಯನ್ನು ಭಾರತದ ಅವನಿ ಲೇಖರಾ ಅವರು ಜಯಿಸಿಕೊಂಡಿದ್ದಾರೆ. ಹಾಗೂ ಇವರು ಭಾರತದ ಶೂಟರ್ ಕ್ರೀಡಾಪಟುವಾಗಿದ್ದರೆ. ಮೂಲತಃ ಇವರು ಜೈಪುರದವರಾಗಿದ್ದರೆ, ಇವರು ಒಂಬತ್ತು ವರ್ಷಗಳ ಹಿಂದೆ ಕಾರು ಅಪಘಾತದದಲ್ಲಿ ಗಂಭೀರವಾಗಿ ಗಾಯಗೊಂಡು ವಿಕಲಚೇತನರಾಗಿದ್ದಾರೆ. * ಭಾರತದ ಶೂಟರ್ ಅವನಿ ಲೇಖರಾ ಅವರು 2021 ರ ಪ್ಯಾರಾಲಿಂಪಿಕ್ ಪ್ರಶಸ್ತಿಯ ಮಹಿಳಾ ವಿಭಾಗದಲ್ಲಿ ಈ ಗೌರವ ಪ್ರಶಸ್ತಿಯನ್ನು ಪಡೆದಿದ್ದಾರೆ. * ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯಾರ 10 ಮೀ. ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್‌ ಒನ್ ವಿಭಾಗದಲ್ಲಿ ಚಿನ್ನದ ಪದಕ ಗೆದಿದ್ದಾರೆ, ಹಾಗೂ 50 ಮೀ ರೈಫಲ್ ತ್ರಿ ಪೊಸಿಷನ್‌ ಸ್ಟ್ಯಾಂಡಿಂಗ್‌ ಎಸ್‌ಎಚ್‌ ಒನ್ ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ. ಅವನಿ ಲೇಖರಾ ಅವರು ಭಾಗವಹಿಸಿದ ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನೂ ಗೆದ್ದಿರುವ ಭಾರತದ ಮೊದಲ ಮಹಿಳಾ ಅಥ್ಲೀಟ್ ಇವರಾಗಿದ್ದಾರೆ. ಇತ್ತೀಚಿಗೆ ಭಾರತ ಸರ್ಕಾರವು ಅವನಿ ಲೇಖರಾ ಅವರಿಗೆ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ಪ್ರದಾನ ಮಾಡಿದೆ.