Job Description: * ಇತ್ತೀಚಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಸರ್ಕಾರವು 2022 ರ ಜನೇವರಿ. 01 ರಂದು ಹೊಸ ನಾಲ್ಕೂವರೆ(4.5) ದಿನಗಳ ಕೆಲಸದ ವಾರವನ್ನು ಜಾರಿಗೆ ತರುವದಾಗಿ ತಿಳಿಸಿದೆ. * ಪ್ರಸ್ತುತ UAE ವಿಶ್ವದಾದ್ಯಂತ '5' ದಿನಗಳ ವಾರಕ್ಕಿಂತ ಕಡಿಮೆ ರಾಷ್ಟ್ರೀಯ ಕೆಲಸದ ವಾರವನ್ನು ಜಾರಿಗೆ ತಂದ ವಿಶ್ವದ ಮೊದಲ ದೇಶವಾಗಿದೆ ಹೊರ ಹೊಮ್ಮಿದೆ. * ಇದೀಗ UAE ದೇಶದಲ್ಲಿನ ಜನರ ಸಾಮಾಜಿಕ ಯೋಗಕ್ಷೇಮವನ್ನು ವೃದ್ಧಿಸಲು ಹಾಗೂ ಕೆಲಸ-ಜೀವನದ ಸಮತೋಲನವನ್ನು ವೃದಿಸಲು ಇದು ಅಲ್ಲಿನ ಸರ್ಕಾರದ ಪ್ರಯತ್ನಗಳ ಭಾಗವಾಗಿದೆ. * ಇದೀಗ UAE ಯಲ್ಲಿ 'ಸೋಮವಾರ' ದಿಂದ 'ಗುರುವಾರ'ದವರೆಗೆ ಕೆಲಸದ ಸಮಯ ಬೆಳಿಗ್ಗೆ 7:30 ರಿಂದ ಪ್ರಾರಂಭವಾಗಿ ಮಧ್ಯಾಹ್ನ 3:30 ಕ್ಕೆ ಮುಕ್ತಾಯವಾಗಲಿದೆ, ಹಾಗೂ ಶುಕ್ರವಾರದ ಕೆಲಸದ ಸಮಯವು ಬೆಳ್ಳಿಗೆ 7:30 ಕ್ಕೆ ಆರಂಭವಾಗಿ 12:00 ಕ್ಕೆ ಮುಕ್ತಾಯವಾಗಲಿದೆ. * ಈ ಹೊಸ ನಿಯಮದ ಅನುಸಾರವಾಗಿ ಶುಕ್ರವಾರದ ಧರ್ಮೋಪದೇಶಗಳು, ಹಾಗೂ ಪ್ರಾರ್ಥನೆಗಳು UAE ದೇಶಾದ್ಯಂತ ಮಧ್ಯಾಹ್ನ 1:15 ಕ್ಕೆ ಆರಂಭವಾಗುತ್ತವೆ ಎಂದು ತಿಳಿಸಿದ್ದಾರೆ. * ಇದೇ ರೀತಿಯ ಕಾನೂನನ್ನು ಫ್ರಾನ್ಸ್ ದೇಶ ಹೊಂದಿದೆ, ಇದೀಗ ಆ ದೇಶದಲ್ಲಿ 35-ಗಂಟೆಗಳ ಕೆಲಸದ ವಾರವನ್ನು ಹೊಂದಿದೆ, ಅಂದರೆ 4 ದಿನಗಳು, ಹಾಗೂ '3' ಗಂಟೆಗಳು. * ಫ್ರಾನ್ಸ್ ದೇಶವು ಈ ಕಾನೂನನ್ನು 2000 ರಿಂದ ಕ್ರೋಡೀಕರಿಸಿದೆ.