Job Description: * ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗ (NCW) ಇದೇ ಡಿಸೆಂಬರ್. 07 ರಂದು 'ಅವಳು ಬದಲಾವಣೆ ಮಾಡುವವಳು' (She is a changemaker) ಎಂಬ ಪ್ಯಾನ್-ಇಂಡಿಯಾ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಆರಂಭಿಸಿದೆ. * ಈ ಚೇಂಜ್ಮೇಕರ್ ಕಾರ್ಯಕ್ರಮವನ್ನು ರಾಜಕೀಯದಲ್ಲಿ ಮಹಿಳೆಯರಿಗಾಗಿ ಆರಂಭಿಸಲಾಗಿದೆ, ಹಾಗೂ ಈ ಕಾರ್ಯಕ್ರಮವನ್ನು ಪ್ರದೇಶವಾರು ತರಬೇತಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. * ಈ ಕಾರ್ಯಕ್ರಮದ ಮೂಲಕ ಮಹಿಳಾ ರಾಜಕೀಯ ನಾಯಕರ ಸಾಮರ್ಥ್ಯ, ನಿರ್ಧಾರ ಹಾಗೂ ಸಂವಹನ ಕೌಶಲ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಆರಂಭಿಸಲಾಗಿದೆ. * 'She is a changemaker' ತರಬೇತಿ ಕಾರ್ಯಕ್ರಮಗಳ ಪ್ರಾರಂಭವು ಮಹಾರಾಷ್ಟ್ರದ ಥಾಣೆಯ ರಂಭೌ ಮ್ಹಲ್ಗಿ ಪ್ರಬೋಧಿನಿ(Rhamabhau Mhalgi Prabodhini) ಅವರ ಸಹಯೋಗದೊಂದಿಗೆ ಜರುಗಿತು. * ರಾಷ್ಟ್ರೀಯ ಮಹಿಳಾ ಆಯೋಗ (NCW)ನ ಅಧ್ಯಕ್ಷೆ ರೇಖಾ ಶರ್ಮಾ ಅವರು 'ಅವಳು ಬದಲಾವಣೆ ಮಾಡುವವಳು' ಕಾರ್ಯಕ್ರಮವನ್ನು ಆರಂಭಿಸಿದರು. * ರಾಷ್ಟ್ರೀಯ ಮಹಿಳಾ ಆಯೋಗ (NCW) ಇದೊಂದು ಭಾರತ ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿದೆ, ಈ ಸಂಸ್ಥೆಯು ಮಹಿಳೆಯರಿಗೆ ಸಂಬಂಧಿಸಿದ ಎಲ್ಲಾ ನೀತಿ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆಯನ್ನು ನೀಡುತ್ತದೆ. * ಈ ಹಿಂದೆ 1992 ರ ಜನವರಿ. 31 ರಂದು ರಾಷ್ಟ್ರೀಯ ಮಹಿಳಾ ಆಯೋಗ (NCW)ವನ್ನು, ರಾಷ್ಟ್ರೀಯ ಮಹಿಳಾ ಆಯೋಗದ ಕಾಯಿದೆ, 1990 ರ ನಿಬಂಧನೆಗಳಿಗೆ ಅನುಗುಣವಾಗಿ ಸ್ಥಾಪನೆ ಮಾಡಲಾಗಿದೆ. * ಜಯಂತಿ ಪಟ್ನಾಯಕ್ ಅವರು ರಾಷ್ಟ್ರೀಯ ಮಹಿಳಾ ಆಯೋಗ (NCW)ದ ಮೊದಲ ಅಧ್ಯಕ್ಷೆ.