Job Description: * ಪ್ರಸ್ತುತ ದೂರಸಂಪರ್ಕ ಇಲಾಖೆ (Department of Telecommunications) ಹೊಸ ಆದೇಶದ ಮೇರೆಗೆ ಒಂದು ವೇಳೆ 9 ಕ್ಕಿಂತ ಹೆಚ್ಚು ಸಿಮ್ ಕಾರ್ಡುಗಳನ್ನು ಹೊಂದಿದ್ದರೆ, ಆ ಹೆಚ್ಚುವರಿ ಸಿಮ್ ಗಳನ್ನು ಡೀಆಕ್ಟಿವೇಟ್ ಮಾಡಲಾಗುತ್ತದೆ ಎಂದು ತಿಳಿಸಿದೆ. * ಇದೀಗ ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ 6 ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಗಳಿದ್ದರೆ ರದ್ದಾಗುತ್ತವೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. * ಪ್ರಸ್ತುತ ದೂರಸಂಪರ್ಕ ಇಲಾಖೆ ಸ್ಥೂಲ ಪರಿಶೀಲನೆ ನಡೆಸಲಿದೆ, ಒಂದು ವೇಳೆ ಯಾವ ಒಬ್ಬ ವ್ಯಕ್ತಿ ಹತ್ತಿರ ಬೇರೆ ಬೇರೆ ಟೆಲಿಕಾಂ ಸಂಸ್ಥೆಗಳಿಗೆ ಸೇರಿರುವ ಒಟ್ಟು 9 ಕ್ಕೂ ಹೆಚ್ಚು ಸಿಮ್ ಕಾರ್ಡ್'ಗಳು ಪತ್ತೆಯಾದರೆ, ಆ ಸಂಧರ್ಭದಲ್ಲಿ ಎಲ್ಲಾ ಸಿಮ್ ಕಾರ್ಡ್ ಸಂಪರ್ಕವನ್ನು ರೀವೆರಿಫಿಕೇಶನ್ ಮಾಡಲಾಗುತ್ತದೆ, ಈ ರೀವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ಬಳಕೆದಾರ ತನಗೆ ಅಗತ್ಯವಿರುವ ಸಿಮ್ ಕಾರ್ಡ್ ಮಾತ್ರ ಉಳಿಸಿಕೊಂಡು ಇನ್ನ ಉಳಿದ ಸಿಮ್ ಕಾರ್ಡ'ಗಳನ್ನು ಡೀಆಕ್ಟಿವೇಟ್ ಮಾಡುವ ಆಯ್ಕೆ ಲಭ್ಯವಾಗಲಿದೆ ಎಂದು ದೂರಸಂಪರ್ಕ ಇಲಾಖೆ ಮಾಹಿತಿ ನೀಡಿದೆ.