Job Description: * ಇದೇ 2021 ಡಿಸೆಂಬರ್. 08 ರಂದು, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ Mi-17V5 ತಮಿಳುನಾಡಿನ ಕುನೂರ್ ನಗರದ ಸಮೀಪವಿರುವ ನೀಲಗಿರಿಯಲ್ಲಿ ಪತನಗೊಂಡಿದೆ. * ಈ ಹೆಲಿಕಾಪ್ಟರ್ ಅಪಘಾತದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್(CDS) ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ, ಇವರ ಜೊತೆಯಲ್ಲಿ ಇವರ ವೈಯಕ್ತಿಕ ಸಿಬ್ಬಂದಿಯ 11 ಸದಸ್ಯರು ಮೃತಪಟ್ಟಿದ್ದಾರೆ. * ಈ ಹಿಂದೆ 2009 ರ ಸೆಪ್ಟೆಂಬರ್. 02 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ಇದೇ ರೀತಿಯ ಅಪಘಾತದಲ್ಲಿ ಆಂಧ್ರಪ್ರದೇಶದ ಕರ್ನೂಲ್ ಬಳಿ ಬೆಟ್ಟಗಳಿಗೆ ಅಪ್ಪಳಿಸಿತು. * ಇದೇ ರೀತಿಯಲ್ಲಿ 2001 ರ ಸೆಪ್ಟೆಂಬರ್. 30 ರಂದು, ಮಾಜಿ ನಾಗರಿಕ ವಿಮಾನಯಾನ ಸಚಿವ ಮಾಧವರಾವ್ ಸಿಂಧಿಯಾ ಅವರು ಕೆಟ್ಟ ಹವಾಮಾನದ ಪರಿಸ್ಥಿಯಲ್ಲಿ ಕಾನ್ಪುರಕ್ಕೆ ತೆರಳಿದರು, ಆ ಸಂಧರ್ಭದಲ್ಲಿಯೂ ಕೂಡ ವಿಮಾನ ಪತನಗೊಂಡು, ಅದರಲ್ಲಿರುವ ಎಲ್ಲರೂ ಮೃತಪಟ್ಟರು. * ಜನರಲ್ ಬಿಪಿನ್ ರಾವತ್ ಅವರು ಒಬ್ಬ ಭಾರತೀಯ ಮಿಲಿಟರಿ ಅಧಿಕಾರಿ ಮತ್ತು ಭಾರತೀಯ ಸೇನೆಯ ನಾಲ್ಕು ಸ್ಟಾರ್ ಜನರಲ್ ಆಗಿದ್ದರು, ಅಷ್ಟೇ ಅಲ್ಲದೇ ಭಾರತೀಯ ಸಶಸ್ತ್ರ ಪಡೆಗಳ ಮೊದಲ ರಕ್ಷಣಾ ಸಿಬ್ಬಂದಿಯಾಗಿ (CDS) ನೇಮಕವಾಗಿದ್ದರು. * ಬಿಪಿನ್ ರಾವತ್ ಅವರು ಜನೇವರಿ 2020 ರಿಂದ ಡಿಸೆಂಬರ್ 2021 ರವರೆಗೆ ಅಂದರೆ, ಈ ಅಪಘಾತ ಸಂಭವಿಸುವರೆಗೂ CDS ಆಗಿ ಸೇವೆ ಸಲ್ಲಿಸುತ್ತಿದ್ದರು. * ಈ ಮೊದಲು ಇವರು ಚೀಫ್ಸ್ ಆಫ್ ಸ್ಟಾಫ್ ಸಮಿತಿಯ 57 ನೇ, ಹಾಗೂ ಕೊನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಹಾಗೂ ಇವರು ಭಾರತೀಯ ಸೇನೆಯ 26 ನೇ ಸೇನಾ ಮುಖ್ಯಸ್ಥರಾಗಿದ್ದರು. * ಈ ಹಿಂದೆ 1978 ರಲ್ಲಿ ಬಿಪಿನ್ ರಾವತ್ ಅವರನ್ನು 11 ಗೂರ್ಖಾ ರೈಫಲ್ಸ್ನ 5 ನೇ ಬೆಟಾಲಿಯನ್ಗೆ ನಿಯೋಜನೆ ಮಾಡಲಾಯಿತು, ಹಾಗೂ ಇವರು ಹತ್ತು ವರ್ಷಗಳವರೆಗೆ ಬಂಡಾಯ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಿದರು. * ಭಾರತ ಸರ್ಕಾರವು ಇವರನ್ನು 17 ಡಿಸೆಂಬರ್ 2016 ರಂದು ಸೇನಾ ಸಿಬ್ಬಂದಿಯ 27 ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು, ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರ ನಿವೃತ್ತಿಯ ನಂತರ ಅವರು 31 ಡಿಸೆಂಬರ್ 2016 ರಂದು 27 ನೇ COAS ಆಗಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.