Job Description: * ಪ್ರಸ್ತುತ ಅಸ್ಸಾಂ ರಾಜ್ಯ ಸರ್ಕಾರವು ತನ್ನ ರಾಜ್ಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಾಣ ಮಾಡಲು ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಉದ್ಯಮಿ ಹಾಗೂ ಟಾಟಾ ಟ್ರಸ್ಟ್ನ ಅಧ್ಯಕ್ಷರಾಗಿರುವ ರತನ್ ಟಾಟಾ ಅವರಿಗೆ ತನ್ನ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ 'ಅಸ್ಸಾಂ ಬೈಭವ್'ವನ್ನು ಪ್ರದಾನ ಮಾಡಲಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಿಳಿಸಿದ್ದಾರೆ. * ಅಸ್ಸಾಂ ರಾಜ್ಯ ಸರ್ಕಾರವು ಟಾಟಾ ಟ್ರಸ್ಟ್ ಸಹಯೋಗದಲ್ಲಿ ರಾಜ್ಯದಲ್ಲಿ 19 ಕ್ಯಾನ್ಸರ್ ಕೇರ್ ಘಟಕಗಳನ್ನು ಸ್ಥಾಪನೆ ಮಾಡುತ್ತಿದೆ, ಈ ಹಿಂದೆ 2018ರ ಜೂನ್'ನಲ್ಲಿ ಈ ಎಲ್ಲ ಘಟಕಗಳ ಸ್ಥಾಪನೆಗೆ ರತನ್ ಟಾಟಾ ಅವರ ಉಪಸ್ಥಿತಿಯಲ್ಲಿ ಅಡಿಪಾಯವನ್ನು ನೆರವೇರಿಸಲಾಗಿದೆ. * ಅಸ್ಸಾಂ ಸರ್ಕಾರದ ಈ ಒಪ್ಪಂದಕ್ಕೆ ಅಡ್ವಾಂಟೇಜ್ ಅಸ್ಸಾಂ - ಗ್ಲೋಬಲ್ ಇನ್ವೆಸ್ಟ್ಮೆಂಟ್ ಶೃಂಗಸಭೆ 2018ರಲ್ಲಿ ಟಾಟಾ ಟ್ರಸ್ಟ್ ಕ್ಯಾನ್ಸರ್ ಕೇರ್ ಘಟಕವನ್ನು ಸ್ಥಾಪನೆ ಮಾಡಲು ಸಹಿ ಹಾಕಲಾಗಿದೆ. * ಅಸ್ಸಾಂ ಸರ್ಕಾರದ 'ಅಸ್ಸಾಂ ಬೈಭವ್' ಪ್ರಶಸ್ತಿಯನ್ನು ಈ ಹಿಂದೆ 'ಅಸ್ಸಾಂ ರತ್ನ' ಎಂದು ಕರೆಯಲಾಗುತ್ತಿತ್ತು.