Job Description: * ಭಾರತದ ಗಡಿ ಸಂರಕ್ಷಣೆ ಹಿತದೃಷ್ಟಿಯಿಂದಾಗಿ, ಹಾಗೂ ಚೀನಾದ ಕಳ್ಳಾಟಗಳನ್ನು ತಡೆಯುವ ನಿಟ್ಟಿನಲ್ಲಿ ಉತ್ತರಾಖಂಡ್ ರಾಜ್ಯದ ಮುನ್ಸಿಯಾರಿ-ಮಿಲಮ್ ರಸ್ತೆ ನಿರ್ಮಾಣವನ್ನು ಮುಂಬರುವ 2023ರ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಗಡಿ ರಸ್ತೆ ನಿರ್ಮಾಣ ಸಂಸ್ಥೆ (BRO) ತಿಳಿಸಿದೆ. * ಭಾರತೀಯ ಗಡಿ ರಸ್ತೆ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ರಸ್ತೆ ಕಾರ್ಯವು ಮುಗಿದ ಮೇಲೆ ಉತ್ತರಾಖಂಡದ ಜೋಹರ್ ಕಣಿವೆಯಲ್ಲಿರುವಂತಹ ಭಾರತ-ಚೀನಾ ಗಡಿಭಾಗದ ಕೊನೆಯ ಪೋಸ್ಟನ್ನು(ಹಂತವನ್ನು) ತಲುಪಲು ಭಾರತೀಯ ಸೈನಿಕರಿಗೆ ಈ ರಸ್ತೆಯಿಂದ ಸಹಾಯವಾಗಲಿದೆ ಎಂದು ತಿಳಿಸಿದೆ. * ಇದೀಗ ಮುನ್ಸಿಯಾರಿ ದಿಂದ 25 ಕಿ.ಮೀ. ರಸ್ತೆ ನಿರ್ಮಾಣದ ಕಾರ್ಯ ಪೂರ್ಣವಾಗಿದೆ, ಹಾಗೂ ಮಿಲಮ್ ಪ್ರದೇಶದಿಂದ 9 ಕಿ.ಮೀ. ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ.