Job Description: * ಪ್ರಸ್ತುತ ಜಾರ್ಖಂಡ್ ರಾಜ್ಯವು ದೇಶದಲ್ಲಿ ಅತೀ ಕಡಿಮೆ ಆದಾಯ ಹೊಂದಿರುವ ರೈತರನ್ನು ಹೊಂದಿರುವ ರಾಜ್ಯವಾಗಿದೆ, ಇದರ ನಂತರ ಒಡಿಶಾ ರಾಜ್ಯವು 2ನೇ ಸ್ಥಾನದಲ್ಲಿದೆ. * ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಯಲ್ಲಿ ತಿಳಿಸಿರುವ ಮಾಹಿತಿಯ ಪ್ರಕಾರ ಪ್ರಸ್ತುತ ಒಡಿಶಾ ರಾಜ್ಯದಲ್ಲಿನ ರೈತರ ಸರಾಸರಿ ಮಾಸಿಕ ಆದಾಯವು ಅತೀ ಕಡಿಮೆಯಾಗಿದೆ ಎಂದು ವರದಿ ಮಾಡಿದ್ದಾರೆ. * ಜಾರ್ಖಂಡ್ ರಾಜ್ಯ ಕೃಷಿ ವರ್ಷ ಜುಲೈ 2018-ಜೂನ್ 2019 ರ ಅವಧಿಯಲ್ಲಿ ರಾಜ್ಯದ ಪ್ರತಿ ಕೃಷಿ ಕುಟುಂಬದ ಸರಾಸರಿ ಮಾಸಿಕ ಆದಾಯವು 4,895 ರೂಪಾಯಿಯಾಗಿತ್ತು, ಹಾಗೂ ಒಡಿಶಾ ರಾಜ್ಯದಲ್ಲಿನ ರೈತರ ಮಾಸಿಕ ಸರಾಸರಿ ಆದಾಯವು 5,112 ರೂಪಾಯಿಯಾಗಿತ್ತು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮಾಹಿತಿ ನೀಡಿದ್ದಾರೆ. * ಕೇಂದ್ರ ಸರ್ಕಾರವು ಎಪ್ರಿಲ್ 2016 ರಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ಹಾಗೂ ರೈತರ ಸಮಸ್ಯೆಯನ್ನು ನಿವಾರಿಸುವದರ ಜೊತೆಗೆ ಕಾರ್ಯತಂತ್ರಗಳನ್ನು ಶಿಫಾರಸು ಮಾಡಲು ಅಂತರ-ಸಚಿವಾಲಯ ಸಮಿತಿಯನ್ನು ರಚಿಸಿದೆ. * ರಾಜ್ಯವಾರು ಪ್ರತಿ ಕೃಷಿ ಕುಟುಂಬದ ಸರಾಸರಿ ಮಾಸಿಕ ಆದಾಯ: - ಆಂಧ್ರ ಪ್ರದೇಶ 10,480 ರೂಪಾಯಿ. - ಅರುಣಾಚಲ ಪ್ರದೇಶ 19,225 ರೂಪಾಯಿ. - ಅಸ್ಸಾಂ 10,675 ರೂಪಾಯಿ. - ಬಿಹಾರದಲ್ಲಿ 7,542 ರೂಪಾಯಿ. - ಗುಜರಾತ್ 12,631 ರೂಪಾಯಿ. - ಮೇಘಾಲಯ 29,348 ರೂಪಾಯಿ. - ಪಂಜಾಬ್ 26,701 ರೂಪಾಯಿ. - ಕರ್ನಾಟಕ 13,441 ರೂಪಾಯಿ.