Job Description: * ಪ್ರಸ್ತುತ ZyCov - D ಇದು ಕೋವ್ಯಾಕ್ಸಿನ್ ಲಸಿಕೆಯ ನಂತರದ 2ನೇ ಸ್ಥಳೀಯ ಲಸಿಕೆಯಾಗಿದೆ, ಈ ZyCov - D ಲಸಿಕೆಯನ್ನು ಮೊದಲಿಗೆ ಏಳು ರಾಜ್ಯಗಳಲ್ಲಿ ಆರಂಬಿಸಲಾಗುವದು ಎಂದು ತಿಳಿದು ಬಂದಿದೆ. * ZyCov - D ಲಸಿಕೆಯನ್ನು ಆರಂಭಿಸುವ ಆ '7' ರಾಜ್ಯಗಳು: ತಮಿಳುನಾಡು, ಬಿಹಾರ, ಮಹಾರಾಷ್ಟ್ರ, ಜಾರ್ಖಂಡ್, ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ. * ಈ ಲಸಿಕೆಯನ್ನು 12 ರಿಂದ 19 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ, ಈ ZyCov - D ಲಸಿಕೆಯನ್ನು ಸೂಜಿ-ಮುಕ್ತ ಲೇಪಕವನ್ನು ಬಳಸಿ ನಿರ್ವಹಿಸಲಾಗುತ್ತದೆ, ಇದು '3' ಡೋಸ್'ನ ಲಸಿಕೆಯಾಗಿದೆ. * ಈ ZyCov – D ಲಸಿಕೆಯ ಬೆಲೆ 376 ರೂ. ಆಗಿದೆ ಹಾಗೂ ಈ ಲಸಿಕೆಯು ಶೇ. 66.6% ದಕ್ಷತೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. * ಈ ZyCov – D ಲಸಿಕೆಯನ್ನು ಕ್ಯಾಡಿಲಾ ಹೆಲ್ತ್ಕೇರ್ ಎಂಬ ಭಾರತೀಯ ಫಾರ್ಮಾಸ್ಯುಟಿಕಲ್ ಕಂಪನಿ ಅಭಿವೃದ್ಧಿಪಡಿಸಿದೆ, ಪ್ರಸ್ತುತ ಈ ಲಸಿಕೆಯನ್ನು ಪ್ಲಾಸ್ಮಿಡ್ DNA ಮೇಲೆ ಅಭಿವೃದ್ಧಿಪಡಿಸಲಾಗಿದೆ.