Job Description: * ಇತ್ತೀಚೆಗೆ SpaceX 50 ಉಪಗ್ರಹಗಳನ್ನು ಉಡಾವಣೆ ಮಾಡಿದೆ, ಹಾಗೂ ಈ ಎಲ್ಲ ಉಪಗ್ರಹಗಳು ಸ್ಟಾರ್ಲಿಂಕ್ ಮೆಗಾ ಸಮೂಹವನ್ನು ಸೇರಿಕೊಳ್ಳಲಿವೆ, ಈ ಉಪಗ್ರಹಗಳನ್ನು ಫಾಲ್ಕನ್ 9 ರಾಕೆಟ್ ಬಳಸಿ ಉಡಾವಣೆ ಮಾಡಲಾಗಿದೆ. * ಸ್ಪೇಸ್ಎಕ್ಸ್ (SpaceX) ಸಂಸ್ಥೆಯು 48 ಸ್ಟಾರ್ಲಿಂಕ್ ಉಪಗ್ರಹಗಳ ಹಾಗೂ ಬ್ಲ್ಯಾಕ್ಸ್ಕಿ (Blacksky) ಗ್ಲೋಬಲ್ ಎಂಬ 2 ಭೂ ವೀಕ್ಷಣಾ ಉಪಗ್ರಹಗಳನ್ನು ಉಡಾವಣೆ ಮಾಡಿದೆ, ಈ ಬ್ಲ್ಯಾಕ್ಸ್ಕಿ (Blacksky) ಉಪಗ್ರಹಗಳು ಭೂಮಿಯ ಯಾವುದೇ ಪ್ರದೇಶದ ಚಿತ್ರಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. * ಪ್ರಸ್ತುತ ಸ್ಟಾರ್ಲಿಂಕ್ ಸಮೂಹವು ದೊಡ್ಡ ಪ್ರಮಾಣದಲ್ಲಿ ಭೂಮಿಗೆ ಇಂಟರ್ನೆಟ್ ಪ್ರವೇಶವನ್ನು ಒದಗಿಸುವ ಗುರಿಯನ್ನು ಹೊಂದಿದೆ, ಹಾಗೂ ಒಟ್ಟು 1600 ಉಪಗ್ರಹಗಳನ್ನು ಹೊಂದಿದೆ. * ಸ್ಪೇಸ್ಎಕ್ಸ್(SpaceX) 2021 ರ ಡಿಸೆಂಬರ್ ವೇಳೆಗೆ 1,900 ಬ್ರಾಡ್ಬ್ಯಾಂಡ್ ಉಪಗ್ರಹಗಳನ್ನು ಉಡಾವಣೆ ಮಾಡಿದೆ, ಇದಷ್ಟೇ ಅಲ್ಲದೇ ಇನ್ನೂ 30,000 ಉಪಗ್ರಹಗಳನ್ನು ಉಡಾವಣೆ ಮಾಡಲು ಅನುಮೋದನೆಯನ್ನು ಪಡೆದುಕೊಂಡಿದೆ.