Job Description: * ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರವು ಕೊರೊನಾ ರೋಗದಿಂದ ಮೃತಪಟ್ಟ ಬಡವರ ಕುಟುಂಬಗಳಿಗೆ ಪರಿಹಾರ ಧನ ನೀಡುವ ನಿಟ್ಟಿನಲ್ಲಿ 1 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದೆ. * ಈ ಹಿಂದೆ ರಾಜ್ಯ ಸರ್ಕಾರವು ಬಿಪಿಎಲ್(BPL) ಕಾರ್ಡ್ ಹೊಂದಿರುವ ಕುಟುಂಬದಲ್ಲಿನ ದುಡಿಯುವ ವ್ಯಕ್ತಿ ಕೊರೊನಾ ರೋಗದಿಂದ ಮೃತಪಟ್ಟರೆ ಆಗ ಆ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡುವುದಾಗಿ ತಿಳಿಸಿತ್ತು, ಆದರೆ ಇದೀಗ ರಾಜ್ಯ ಸರ್ಕಾರವು ಬದಲಾವಣೆಯನ್ನು ತಂದಿದೆ. * ಇದೀಗ ಬಿಪಿಎಲ್(BPL) ಕುಟುಂಬದ ಯಾವುದೇ ವ್ಯಕ್ತಿ ಕೋವಿಡ್-19 ನಿಂದ ಮೃತಪಟ್ಟರೆ ಇದೀಗ ಆ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ, ಅಷ್ಟೇ ಅಲ್ಲದೇ ರಾಜ್ಯ ಸರ್ಕಾರವು ಪರಿಹಾರ ನೀಡಲು ವ್ಯಕ್ತಿಯ ವಯಸ್ಸಿನ ನಿಬಂಧನೆ ಇರುವದಿಲ್ಲ ಎಂದು ಹೊಸ ತಿದ್ದುಪಡಿ ಆದೇಶವನ್ನು ಸರ್ಕಾರ ತಿಳಿಸಿದೆ.